ಗಾಂಜಾ ಸೇವನೆ: ವಿದ್ಯಾರ್ಥಿಗಳು ಸಹಿತ 10 ಮಂದಿ ಪೊಲೀಸ್ ವಶಕ್ಕೆ - Mahanayaka
6:32 PM Wednesday 5 - February 2025

ಗಾಂಜಾ ಸೇವನೆ: ವಿದ್ಯಾರ್ಥಿಗಳು ಸಹಿತ 10 ಮಂದಿ ಪೊಲೀಸ್ ವಶಕ್ಕೆ

police
26/03/2023

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ ಮೆಂಟ್ ಬಳಿ ಅಪೂರ್ವ ರಾಯ್(20), ಪುನೀತ್(19), ಅಖಿಲ್ ಮಿಶ್ರಾ(21), ಶಿಬಾಶೀಸ್ ದಾಸ್(20), ಯಶ್(21) ಹಾಗೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಬಳಿ ಅನುಜ ಉಮೇಶ(18) ಮತ್ತು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ಕೆವಿನ್ ಕುಲ್ದೀಪ್ ಮಜಲು ಹಾಗೂ ಅಶ್ವಿನ್ ಪೂಜಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅದೇ ರೀತಿ ಉಡುಪಿ ಸೆನ್ ಪೊಲೀಸರು ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿ ಸಾತ್ವಿಕ್ ಜೋಷಿ(19) ಹಾಗೂ ಗೋವಿಂದ ಆರ್.ನಾಯರ್(22) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ