ದಾಖಲೆ ರಹಿತ 1.50 ಲಕ್ಷ ರೂ. ಹಣ ವಶಪಡಿಸಿಕೊಂಡ ವಿಟ್ಲ ಪೊಲೀಸರ್!

ದಾಖಲೆ ರಹಿತವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.50 ಲಕ್ಷ ಹಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ವಶಪಡಿಸಿಕೊಂಡ ಘಟನೆ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ನಡೆದಿದೆ.
ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಶೀರ್ (29) ಎಂದು ಗುರುತಿಸಲಾಗಿದೆ. ಸಾಲೆತ್ತೂರು– ಬಾಕ್ರಬೈಲು ರಸ್ತೆಯ ಮೆದು ಎಂಬಲ್ಲಿ ಕರ್ನಾಟಕ ರಾಜ್ಯದ ಚುನಾವಣೆ ಪ್ರಯುಕ್ತ ತೆರದಿರುವ ಅಂತಾರಾಜ್ಯ ಚೆಕ್ ಪಾಯಿಂಟ್ ನಲ್ಲಿ ಮಾರ್ಚ್ 26 ರಂದು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಇದು ಪತ್ತೆಯಾಗಿದೆ.
ಸಾಲೆತ್ತೂರು ಕಡೆಯಿಂದ ಬಾಕ್ರಬೈಲು ಕಡೆಗೆ ಬರುತ್ತಿದ್ದ ಬಶೀರ್ ಅವರ ಕಾರನ್ನು ಪೊಲೀಸರು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಒಟ್ಟು ಒಂದೂವರೆ ಲಕ್ಷ ಹಣ ಪತ್ತೆಯಾಗಿದೆ ಎನ್ನಲಾಗಿದೆ.
ಹಣದ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ನಗದು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw