ನವೀಕೃತ ಕಾಂಕ್ರೀಟ್ ರಸ್ತೆ ಬಿರುಕು: ಕಳಪೆ ಮಟ್ಟದ ಕಾಮಗಾರಿಗೆ ಆಕ್ರೋಶ

ಉಡುಪಿ; ಭೂಮಿ ಕಂಪಿಸಿದಾಗ ರಸ್ತೆಗಳು ಬಿರುಕು ಬಿದ್ದಂತೆ, ಉಡುಪಿಯ ಶಾರದ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆಯ ನವೀಕೃತ ಕಾಂಕೀಟು ರಸ್ತೆ ಬಿರುಕುಬಿಟ್ಟಿದೆ. ಒಮ್ಮೆಗೆ ಜನರನ್ನು ಆತಂಕ ಒಳಾಗಗುವಂತೆ ಮಾಡಿದರೂ, ಇಲ್ಲಿ ಯಾವುದೂ ಭೂಮಿ ಕಂಪಿಸಿಲ್ಲ.
ಕಳೆದ ಹತ್ತು ದಿನಗಳ ಹಿಂದಷ್ಟೆ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿರುವುದು ಅತೀ ಕಳಪೆಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿದೆ. ಹತ್ತಾರು ವರ್ಷವಾದರೂ ಸುಸ್ಥಿತಿಯಲ್ಲಿರ ಬೇಕಾದ ಕಾಂಕ್ರೀಟ್ ರಸ್ತೆ ಕೇವಲ ಹತ್ತೇ ದಿನಕ್ಕೆ ಬಿರುಕು ಬಿಟ್ಟಿರುವುದು, ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗುತ್ತಿಗೆದಾರರರಿಗೆ ಬಿಲ್ ಪಾವತಿಸುವದನ್ನು ತಡೆಯೊಡ್ಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ರಸ್ತೆಯು ಮೊದಲು ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯಾಗಿತ್ತು. ಬಹಳ ವರ್ಷಗಳ ಕಾಲ ಬಾಳಿಕೆ ಬರುತಿತ್ತು. ವಿನಾಕಾರಣವಾಗಿ ಸುವ್ಯಸ್ಥೆಯಲ್ಲಿದ್ದ ರಸ್ತೆಯನ್ನು ಅಗೆದು ಹಾಕಿದರು. ಮಾಡುತ್ತಿರುವುದು ಸರಿಯಿಲ್ಲ ಎಂದು ಪ್ರತಿಭಟಿಸಿದರೂ ಕೂಗಿಗೆ ಬೆಲೆ ಕೊಡಲಿಲ್ಲ.
ಇವಾಗ ನವೀಕೃತ ರಸ್ತೆ ಕೇವಲ ಹತ್ತೇ ದಿನದಲ್ಲಿ ಬಿರುಕು ಬಿಟ್ಟಿದೆ. ಸಾರ್ವಜನಿಕರ ಹಣ ವ್ಯರ್ಥವಾಗಿರುವುದಕ್ಕೆ ಹೊಣೆ ಯಾರು..? ಈ ಬಗ್ಗೆ ಪೌರಾಯುಕ್ತರಿಗೂ ಮೌಖಿಕ ದೂರು ನೀಡಲಾಯಿತು, ಸ್ಥಳಕ್ಕೆ ಬಂದ ಪೌರಾಯುಕ್ತರು ಪರಿಶೀಲನೆ ನಡೆಸಿದ್ದು, ಅವರಿಗೂ ಸತ್ಯಾಂಶ ಕಂಡುಬಂದಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಸೂಕ್ತವಾದ ಕ್ರಮ ಜರುಗಿಸಬೇಕಾಗಿದೆ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw