ಎಲೆಕ್ಷನ್ ಟೈಂ ರೋಡ್: ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತು ಬಂದ ರಸ್ತೆ!

ಚಾಮರಾಜನಗರ: ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳು ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಈ ರಸ್ತೆ ಒಂದು ನಿದರ್ಶನವಾಗಿದೆ. ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತುಬಂದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ.ಯರಿಯೂರು ಸಂಪರ್ಕ ರಸ್ತೆಯಿಂದ ಮಾಲಾಪುರದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಎರಡು ದಿನದ ಹಿಂದೆಯಷ್ಟೆ ಡಾಂಬರೀಕರಣ ಮಾಡಲಾಗಿತ್ತು. ಗುಣಮಟ್ಟದ ಬಗ್ಗೆ ಸಂಶಯಗೊಂಡ ಜನರು ಪರಿಶೀಲಿಸಿದಾಗ ಡಾಂಬಾರು ಕಿತ್ತು ಬರುತ್ತಿದೆ.
ರೊಟ್ಟಿ ತಟ್ಟುವಂತೆ ಅತಿ ಕಡಿಮೆ ಮಂದಕ್ಕೆ ಡಾಂಬರು ಹಾಕಲಾಗಿದೆ. ಕೈನಿಂದ ಡಾಂಬರನ್ನು ಸುಲಭವಾಗಿ ಕೀಳಬಹುದಾಗಿದೆ. ಇದು ಶೇ.60 ಕಮಿಷನ್ ಪ್ರಭಾವ ಎಂದು ಮಾಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನೂ ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಚುನಾವಣಾ ಸಮಯದಲ್ಲಿ ಮಾಯಜಾಲದಂತೆ ಕಾಮಗಾರಿಗಳು ನಡೆಯುತ್ತದೆ ಎಂಬುದಕ್ಕೆ ಈ ರಸ್ತೆ ಉದಾಹರಣೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw