ಬಿಜೆಪಿಯ ಶಾಸಕರೊಂದಿಗೆ ಮಹಿಳೆಯ ಪೋಟೋ ವೈರಲ್ ವಿಚಾರ: ಶಾಸಕರ ಆಪ್ತನಿಂದ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು - Mahanayaka
4:22 PM Wednesday 5 - February 2025

ಬಿಜೆಪಿಯ ಶಾಸಕರೊಂದಿಗೆ ಮಹಿಳೆಯ ಪೋಟೋ ವೈರಲ್ ವಿಚಾರ: ಶಾಸಕರ ಆಪ್ತನಿಂದ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು

viral photo
06/04/2023

ಬಿಜೆಪಿಯ ಶಾಸಕರೊಂದಿಗೆ ಮಹಿಳೆಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆಯು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೆಕ್ಕಿಲಾಡಿಯ ನಿವಾಸಿಯಾಗಿರುವ ಈ ಮಹಿಳೆಯು ನನ್ನ ಪೋಟೋದೊಂದಿಗೆ ಬೇರೆಯವರೊಬ್ಬರ ಪೋಟೋವನ್ನು ವಿಭಿನ್ನ ರೀತಿಯಲ್ಲಿ ಜೋಡಿಸಿ, ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇಲ್ಲಿ ಅಸಹ್ಯ ಹಾಗೂ ಅಶ್ಲೀಲವಾಗಿ ನನ್ನನ್ನು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ನನ್ನ ಘನತೆಗೆ ಕುಂದುಂಟುಮಾಡುವ ಕಾರ್ಯ ನಡೆದಿದೆ.

ನನ್ನ ಫೋಟೋವನ್ನು ಶಾಸಕರೊಬ್ಬರ ಜೊತೆಗೆ ಎಡಿಟ್ ಮಾಡಿ ವೈರಲ್ ಮಾಡ್ತಿದ್ದಾರೆ. ನನಗೆ ಶಾಸಕರಿಗೆ ಯಾವುದೇ ಅಂತಹ ಸಂಬಂಧ ಇಲ್ಲ. ಇದರಿಂದ ನನ್ನ ಕುಟುಂಬದ ಮಂದಿ ನಾಚಿಕೆ ಪಡುವಂತಾಗಿದೆ. ನನ್ನ ಮೇಲೆ ಈ ರೀತಿ ದೌರ್ಜನ್ಯ ಮಾಡಲಾಗ್ತಿದೆ. ನನ್ನ ಫೋಟೋವನ್ನು ಬೇಕೂಂತಲೇ ಎಡಿಟ್ ಮಾಡಿ ತೇಜೋವಧೆ ಮಾಡ್ತಿದಾರೆಂದು ನೊಂದ ಮಹಿಳೆ ಆರೋಪಿಸಿದ್ದಾರೆ.

ಫೋಟೋ ಎಡಿಟ್ ಮಾಡಿ ನನಗೆ ಬೆದರಿಕೆ ಬರ್ತಿದೆ. ಈ ರೀತಿ ಎಡಿಟ್ ಮಾಡಿ ತೇಜೋವಧೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಾನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಅಂದರು. ಅಲ್ಲದೇ ಈ ರೀತಿ ಮಾಡಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸೈಬರ್ ಕ್ರೈಮ್ ವಿಭಾಗಕ್ಕೆ ದೂರು:

case

ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕ ಸಂಜೀವ ಮಠಂದೂರು  ಅವರು ಮಹಿಳೆಯೊಂದಿಗೆ ಇರುವ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಠಂದೂರು ಆಪ್ತ ಸಹಾಯಕ ವಸಂತ್ ಎಸ್. ದೂರು ನೀಡಿದ್ದಾರೆ.

ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗಕ್ಕೆ ಆಪ್ತ ನೀಡಿರುವ ದೂರಿನಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಸಂತ ಎಂಬವರು ದೂರು ದಾಖಲಿಸಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಫೊಟೋವನ್ನು ಮಹಿಳೆಯೊಬ್ಬರ ಫೊಟೋದೊಂದಿಗೆ ಎಡಿಟ್ ಮಾಡಿ, ಫೇಸ್ ಬುಕ್, ವಾಟ್ಸ್ ಆ್ಯಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ಶಾಸಕರ ಮಾನಹಾನಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ವಿಭಾಗದ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ