ಮನೆಯ ಕಾಂಪೌಂಡ್ ಒಳಗೆ ಪತ್ತೆಯಾದ 5 ಅಡಿ ಉದ್ದದ ನಾಗರ ಹಾವು
ಬಿಸಿಲಿನ ತಾಪಮಾನಕ್ಕೆ ತಾಪಮಾನದಿಂದ ಪಾರಾಗಲು ನಾಗರಹಾವುಗಳು ಮನೆಗಳ ಬಳಿ ಬಂದು ಅವಿತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಅದೇ ರೀತಿ ತುಮಕೂರು ಗ್ರಾಮಾಂತರ ಕೋರ ಹೋಬಳಿ ಕಾಟೇನಹಳ್ಳಿ ನಿವಾಸಿ ಸೋಮ ಶೇಖರಯ್ಯ ಎಂಬುವರ ಮನೆಯ ಕಾಂಪೌಂಡ್ ಒಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಸೇರಿಕೊಂಡು ಗಾಬರಿ ಹುಟ್ಟಿಸಿತ್ತು.
ತಕ್ಷಣ ಸೋಮಶೇಖರಯ್ಯ ಅವರು ವಾರಂಗಲ್ ಫೌಂಡೇಶನ್ ವನಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯನ್ನು ಸಂಪರ್ಕಿಸಿದರು. ಸ್ಥಳಕ್ಕೆ ಬಂದ ಸಂಸ್ಥೆಯ ಉರಗ ತಜ್ಞ ದಿಲೀಪ್ ಕಾರ್ತಿಕ್ ಪಾಳೇಗಾರ ಭೇಟಿ ನೀಡಿ ಪರಿಶೀಲನೆ ನೀಡಿ ಬೃಹತ್ ಗಾತ್ರದ ನಾಗರಹವನ್ನು ಸೆರೆಹಿಡಿದಿದ್ದಾರೆ.
ರಕ್ಷಣೆ ಮಾಡಿದ್ದ ಹಾವನ್ನು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಬಿಸಿಲಿನ ತಾಪಮಾನ ಜಾಸ್ತಿ ಇರುವುದರಿಂದ ಅವುಗಳು ತಂಪಾದ ಜಾಗ ಅರಸಿ ಬರುತ್ತವೆ. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿದರೆ ಹಾವುಗಳು ಬಂದು ಸೇರಿಕೊಳ್ಳುವುದು ಕಡಿಮೆಯಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw