ವಿದೇಶದಲ್ಲಿ ಉದ್ಯೋಗ, ವೀಸಾ ಕೊಡುವುದಾಗಿ ವಂಚನೆ: ಆರೋಪಿ ಅರೆಸ್ಟ್
ವಿದೇಶದಲ್ಲಿ ಉದ್ಯೋಗ, ವೀಸಾ ಕೊಡಿಸುವುದಾಗಿ ಹೇಳಿಕೊಂಡು ಹಲವಾರು ಮಂದಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಧೀರ್ ರಾವ್ ವಿ.ಆರ್.(42) ಎಂದು ಗುರುತಿಸಲಾಗಿದೆ. ಬಲ್ಗೇರಿಯಾ ದೇಶದಲ್ಲಿ ಉದ್ಯೋಗ-ವೀಸಾ ದೊರಕಿಸಿಕೊಡುವುದಾಗಿ ಹೇಳಿಕೊಂಡು 30ಕ್ಕೂ ಅಧಿಕ ಮಂದಿಯಿಂದ 50 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ಬಳಿಕ ವಂಚಿಸಿರುವ ಆರೋಪ ಈತನ ಮೇಲೆ ಇದೆ. ಈ ಬಗ್ಗೆ ಮೂಡಬಿದ್ರೆ ಮತ್ತು ಬಂಟ್ವಾಳ ನಗರ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.
ಈ ಹಿಂದೆಯೂ ಸುಧೀರ್ ರಾವ್ ಕಾರು ಖರೀದಿಸುವ ಸಲುವಾಗಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಸೊಸೈಟಿಯಲ್ಲಿ ಅದನ್ನಿಟ್ಟು ಕಾರು ಖರೀದಿಸಿದ್ದ. ಬಳಿಕ ಕಂತು ಪಾವತಿಸದೆ ವಂಚಿಸಿದ್ದ. ಇದರಿಂದ ಜಾಮೀನು ನಿಂತವರು ಸಂಕಷ್ಟಕ್ಕೀಡಾಗಿದ್ದರು.
ಈ ಬಗ್ಗೆ ಸುರತ್ಕಲ್‌ನಲ್ಲಿ 2, ಕದ್ರಿಯಲ್ಲಿ 2, ಕಂಕನಾಡಿ ನಗರ ಮತ್ತು ಪಾಂಡೇಶ್ವರ ಠಾಣೆಯಲ್ಲಿ ತಲಾ ಒಂದು ಸಹಿತ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಆರೋಪಿಯು ಪ್ರಕರಣ ದಾಖಲಾದ ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ಇರುವಿಕೆಯ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw