ಟಿಕೆಟ್ ವಿವಾದದ ನಡುವೆಯೇ ಕೆಂಡ ತುಳಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ

ಬಿಜೆಪಿ ಟಿಕೆಟ್ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶಾಸಕ ಕುಮಾರಸ್ವಾಮಿ ಅವರಿಗೆ ದಿನಕ್ಕೊಂದು ಸಂಕಷ್ಟಗಳು ಎದುರಾಗುತ್ತಿದೆ. ರಾಜಕೀಯ ಜೀವನದ ಏರಿಳಿತದ ನಡುವೆಯೇ ಕುಮಾರಸ್ವಾಮಿ ಅವರು ಬೀರಲಿಂಗೇಶ್ವರ ಸ್ವಾಮಿ ಸುಗ್ಗಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ಕಳಸ ತಾಲೂಕಿನ ಬೀರಲಿಂಗೇಶ್ವರ ಸ್ವಾಮಿ ಸುಗ್ಗಿ ಉತ್ಸವ ನಡೆಯುತ್ತಿದ್ದು, ಈ ವೇಳೆ ಕಾರ್ಯಕರ್ತರ ಜೊತೆಗೂಡಿ ಶಾಸಕ ಕುಮಾರಸ್ವಾಮಿ ಅವರು ಕೆಂಡದ ಮೇಲೆ ಓಡುವ ಮೂಲಕ ದೇವರಿಗೆ ವಿಶೇಷ ಸೇವೆ ಅರ್ಪಿಸಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒಂದು ಗುಂಪು ಒತ್ತಾಯಿಸಿದರೆ, ಮತ್ತೊಂದು ಗುಂಪು ಟಿಕೆಟ್ ನೀಡಬಾರದು ಎಂದು ತೀವ್ರವಾಗಿ ಹೋರಾಟಕ್ಕಿಳಿದಿವೆ. ಈ ಗುಂಪಿನ ಮಧ್ಯೆ ಕುಮಾರಸ್ವಾಮಿ ಕಂಗಾಲಾಗಿದ್ದಾರೆ. ರಾಜಕೀಯ ಏರಿಳಿತದ ನಡುವೆಯೇ ಕೆಂಡತುಳಿದ ಕುಮಾರಸ್ವಾಮಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EOUjVqy3Mmp66N4bRSBoht
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw