ಬೆಳ್ತಂಗಡಿ: ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು - Mahanayaka
9:22 PM Wednesday 11 - December 2024

ಬೆಳ್ತಂಗಡಿ: ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

fire
13/04/2023

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ದೇವಗಿರಿಯ ಪಾರಮಲೆ ಎಂಬಲ್ಲಿ ಮಧ್ಯರಾತ್ರಿ  ಕಿಡಿಗೇಡಿಗಳು ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿ ಇಟ್ಟು ಪರಾರಿಯಾದ ಘಟನೆ ನಡೆದಿದೆ.

ಈ ಪ್ರದೇಶದ ಸುತ್ತಮುತ್ತಲು ರಬ್ಬರ್ ತೋಟಗಳು ಇದ್ದು, ಇದೇ ವೇಳೆ ಜೋಸೆಫ್ ಎಂಬುವರು ಬೆಂಕಿ ಬಿದ್ದಿರುವುದನ್ನು ಗಮನಿಸಿ, ರಿಸ್ಕ್ಯೂ ಟೀಮ್ ಮೆಂಬರ್ಸ್ ಆಗಿರುವ ಜೋಸೆಫ್ ಪಿ.ವಿ., ಸುನಿಲ್, ಜೋಶಿ, ಸೆಬಾಸ್ಟಿಯನ್, ಜಿಬಿನ್, ಜಾರ್ಜ್ ಮತ್ತು ಸಂತೋಷ್ ಎಂಬುವರನ್ನು ಕರೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಘಟನೆಯಿಂದ ಯಾವುದೇ ನಷ್ಟ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ಇಟ್ಟ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ಇಂತಹ ದುರ್ಘಟನೆ ಇನ್ನು ಮುಂದೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

fire

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ