ಗೋಮೂತ್ರ ಸೇವನೆ ಮಾನವನ ಆರೋಗ್ಯಕ್ಕೆ ಅಪಾಯಕಾರಿ: ಸಂಶೋಧನೆ
ನವದೆಹಲಿ: ಗೋಮೂತ್ರ ಸೇವನೆ ಮಾನವನಿಗೆ ಅಪಾಯಕಾರಿಯಾಗಿದ್ದು, ಇದರಲ್ಲಿ ಕನಿಷ್ಠ 14 ವಿಧದ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆ(IVRI) ಅಧ್ಯಯನ ಹೇಳಿದೆ.
ಹಸುಗಳು ಹಾಗೂ ಹೋರಿಗಳ ಮೂತ್ರದ ಮಾದರಿಗಳನ್ನು ಬಳಸಿ ಅಧ್ಯಯನ ನಡೆಸಲಾಗಿದ್ದು, ಈ ಅಧ್ಯಯನದಲ್ಲಿ 14 ವಿವಿಧ ಹಾನಿಕಾರಕ ಬ್ಯಾಕ್ಟೀರಿಯಾಗಳು ಗೋಮೂತ್ರದಲ್ಲಿ ಪತ್ತೆಯಾಗಿವೆ. ಹಾಗಾಗಿ ಗೋ ಮೂತ್ರ ಸೇವನೆ ಮಾಡಿದರೆ ಮಾನವನ ಹೊಟ್ಟೆಯಲ್ಲಿ ಸೋಂಕು ಉಂಟಾಗಬಹುದು ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನವನ್ನು 3 ಪಿಎಚ್ ಡಿ ವಿದ್ಯಾರ್ಥಿಗಳ ಜೊತೆಗೂಡಿ ಡಾ.ಭೋಜರಾಜ್ ಸಿಂಗ್ ಅವರು ನಡೆಸಿದ್ದು, 2022ರ ಜೂನ್ ನಿಂದ 2022ರ ನವೆಂಬರ್ ವರೆಗೆ ನಡೆಸಿದ್ದಾರೆ. ಸಾಹಿವಾಲ್, ಥಾಪರ್ ಹಾಗೂ ವಿಂದವಾನಿ ಹಸುಗಳ ಮಾದರಿಯನ್ನು ಪಡೆದು ಅಧ್ಯಯನ ಮಾಡಲಾಗಿದೆ.
ಬಟ್ಟಿಇಳಿಸಿದ ಗೋಮೂತ್ರವು ಸಾಂಕ್ರಾಮಿಕ ಬ್ಯಾಕ್ಟೀರಿಯಾವನ್ನು ಹೊಂದಿಲ್ಲ ಎಂಬ ನಂಬಿಕೆ ಇದೆ. ಅದರ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ ಎಂದು ಅವರು ಹೇಳಿದರು. ಸದ್ಯ ಬಟ್ಟಿ ಇಳಿಸಿದ ಗೋಮೂತ್ರಗಳ ಮೇಲೆ ಯಾವುದೇ ಸಂಶೋಧನೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw