ರೋಟರಿ ಕ್ಲಬ್ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ
ಪಡುಬಿದ್ರಿ: ರೋಟರಿ ಕ್ಲಬ್ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ. ಆರ್ ಅಂಬೇಡ್ಕರ್ ಅವರ ಜನ್ಮದಿನ ಆಚರಣೆಯನ್ನು ಮಾಡಲಾಯಿತು.
ಪಡುಬಿದ್ರಿ ಓಂಕಾರ್ ಕಲಾಸಂಗಮದಲ್ಲಿ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಶಿಕ್ಷಕಿ ವಂದನಾ ರೈ ಅವರು ಉದ್ಘಾಟಿಸಿ ಮಾತನಾಡಿದರು.
ದಲಿತ ಮುಖಂಡರಾದ ಶೇಖರ್ ಹೆಜಮಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಡೆದು ಬಂದ ದಾರಿ, ಅವರ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷರಾದ ಜ್ಯೋತಿ ಮೆನನ್, ಓಂಕಾರ್ ಕಾಲ ಸಂಗಮದ ಮುಖ್ಯಸ್ಥರಾದ ಗೀತಾ ಅರುಣ್, ಪತ್ರಕರ್ತರಾದ ಸುರೇಶ್ ಎರ್ಮಾಳ್, ದಸಂಸ ರಾಜ್ಯ ಸಂಘಟನಾ ಸಂಚಾಲಾಕಿ ವಸಂತಿ ಶಿವಾನಂದ, ರೋಟರಿ ಸಮುದಾಯದಳದ ಅಧ್ಯಕ್ಷರಾದ ದೀಪಶ್ರೀ, ಸಂತೋಷ್ ಪಡುಬಿದ್ರಿ, ಮೊಹಮದ್ ಹಮೀದ್, ರಮೀಜ್ ಹುಸೈನ್ ಪವನ್ ಕುಮಾರ್, ಸಂತೋಷ್ ಎರ್ಮಾಳ್ ಮುಂತಾದವರು ಉಪಸ್ಥಿತರಿದ್ದರು. ಕೀರ್ತಿಕುಮಾರ್ ಬುದ್ಧವಂದನೆಯನ್ನು ನೆರವೇರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw