ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ: ಪಕ್ಷ ಬಿಟ್ಟವರ ವಿರುದ್ಧ ಅರುಣ್ ಸಿಂಗ್ ಆಕ್ರೋಶ
ಬೆಂಗಳೂರು: ವೈಯಕ್ತಿಕ ಕಾರಣದಿಂದ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳಲಿರುವ ಲಕ್ಷ್ಮಣ ಸವದಿ ವಿರುದ್ದ ಅರುಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಸಿಗಲಿಲ್ಲವೆಂದು ಯಾರೋ ಕೆಲವರು ಪಕ್ಷ ತೊರೆದರೆ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ನಷ್ಟವಿಲ್ಲ. ಆದರೆ, ದುಡುಕಿನ ನಿರ್ಧಾರ ಕೈಗೊಂಡು ಪಕ್ಷ ತೊರೆದವರಿಗೆ ಬಿಜೆಪಿಯ ಬಾಗಿಲು ಬಂದ್ ಆಗಲಿದೆ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಎಚ್ಚರಿಸಿದ್ದಾರೆ.
ಇಂದು ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಸಮಾಜ, ದೇಶ ಸೇವೆ ಮನೋಭಾವದ ಕೋಟ್ಯಂತರ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವುಳ್ಳ ಪಕ್ಷದಲ್ಲಿ ಇರುವುದು ದೊಡ್ಡ ಸೌಭಾಗ್ಯದ ಸಂಗತಿ ಎಂದು ಅವರು ಹೇಳಿದ್ದಾರೆ.
ಗುಂಪುಗಾರಿಕೆ, ಆಂತರಿಕ ಕಿತ್ತಾಟ, ಬಹಿರಂಗವಾಗಿ ಜಗಳವಾಡುವ, ನಾಯಕತ್ವವಿಲ್ಲದ ಕಾಂಗ್ರೆಸ್ ಪಕ್ಷವನ್ನು ಸೇರುವುದು, ಮುಂದೊಂದು ದಿನ ಪಶ್ಚಾತ್ತಾಪಪಡಬೇಕಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw