ಡಾ.ಅಂಬೇಡ್ಕರ್‌ರವರಿಗೆ ಬಿಜೆಪಿ ಶಾಸಕ ರಘು ಅವಮಾನ: ಮೋಹನ್ ದಾಸರಿ ಆರೋಪ
ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಬಿಜೆಪಿ ಶಾಸಕ ಎಸ್.ರಘುರವರು ತಮಗೆ ಹಾಕಿದ ಹಾರವನ್ನೇ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್‌ರವರಿಗೆ ಪ್ರತಿಮೆಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಸಿ.ವಿ.ರಾಮನ್ ನಗರ ಅಭ್ಯರ್ಥಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಆರೋಪ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, “ಏಪ್ರಿಲ್ 14ರ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ರಘು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಬಲಿಗರು ಎಸ್.ರಘುರವರಿಗೆ ಹೂವಿನ ಹಾರ ಹಾಕಿದ್ದರು. ನಂತರ ಆ ಹಾರವನ್ನು ತಮ್ಮ ಕೊರಳಿಂದ ತೆಗೆದು ಬಾಬಾ ಸಾಹೇಬರ ಕೊರಳಿಗೆ ಹಾಕಿದ್ದಾರೆ. ಉಪಯೋಗಿಸಿದ ಹಾರವನ್ನು ಹಾಕುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ. ಇದು ಶಾಸಕ ಎಸ್.ರಘುರವರ ದುರಹಂಕಾರದ ಪರಮಾವಧಿ. ಬಾಬಾ ಸಾಹೇಬರನ್ನು ಬಿಜೆಪಿ ಎಷ್ಟು ಕೇವಲವಾಗಿ ನೋಡುತ್ತದೆ ಎಂಬುದು ಇದರಿಂದ ತಿಳಿಯುತ್ತದೆ” ಎಂದು ಹೇಳಿದರು.
“ರಘುರವರು ಮಾಡಿರುವ ಈ ದುಷ್ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ತಿಳಿದ ಕೂಡಲೇ ನಾನು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಜೊತೆಗೂಡಿ ಎಸ್.ರಘು ಹಾಕಿದ್ದ ಸೆಕೆಂಡ್ ಹ್ಯಾಂಡ್ ಹಾರವನ್ನು ತೆಗೆದು, ಪ್ರತಿಮೆಯನ್ನು ತೊಳೆದು, ಹೊಸ ಹಾರವನ್ನು ಹಾಕಿದ್ದೇವೆ. ಬಾಬಾ ಸಾಹೇಬ್‌ರವರ ಬಗ್ಗೆ ಎಸ್.ರಘುರವರಿಗೆ ಸ್ವಲ್ಪವಾದರೂ ಗೌರವವಿದ್ದರೆ ಪ್ರತಿಮೆಯ ಬಳಿ ನಿಂತು ಕ್ಷಮೆ ಕೇಳಲಿ” ಎಂದು ಮೋಹನ್ ದಾಸರಿ ಆಗ್ರಹಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw