ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ
ರಾಯಚೂರು: ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಯಚೂರಿನಲ್ಲಿ ಏರ್ಪಡಿಸಿದ್ದ ಸಮಾನಮನಸ್ಕರ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಶಿಕ್ಷಣ, ಉದ್ಯೋಗ ಮೀಸಲಾತಿ ನೀಡುವ ಮೂಲಕ ಸ್ವಾಭಿಮಾನಿ ಬದುಕು ಬದುಕಬೇಕೆಂಬ ಅಂಬೇಡ್ಕರ್ ಅವರ ದೂರದೃಷ್ಟಿ ಯಿಂದ ಇದು ಸಾಧ್ಯವಾಗಿದೆ. ಈ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಎಂದರು.
ಹಿಂದಿನ ಸರ್ಕಾರಗಳು ಈ ನಿರ್ಧಾರ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳಿದರು. ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದರು.
ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆರು ಜಾತಿಗಳು ಎಸ್ .ಸಿ ಗೆ ಸೇರಿದ್ದವು. ಈಗ 103 ಜಾತಿಗಳಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ. ಬೇರೆ ರಾಜ್ಯಗಳಲ್ಲಿ 25 / 30 ರಷ್ಟಿಲ್ಲ. ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸ್ಸು ಮಾಡಿದೆ ನ್ಯಾ. ಸುಭಾಷ್ ಅಡಿ ನೇತೃತ್ವದ ಸಮಿತಿ ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ.
ಶಿಕ್ಷಣ, ಉದ್ಯೋಗ ಇಲ್ಲದಿದ್ದರೆ ಸಾಮಾಜಿಕವಾಗಿ ಗುಲಾಮರಾಗಿ ಬದುಕುವ ರೀತಿಗೆ ಮುಕ್ತಿ ತರಬೇಕು. ಮೀಸಲಾತಿ ಮುಟ್ಟಲು ಸಾಧ್ಯವಿಲ್ಲ. ರಾಜಕೀಯ ಜಾಗೃತಿ ಅಗತ್ಯ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂಬ ಕಾನೂನಿಲ್ಲ. ಅವರೂ ಮುಂದೆ ಬಂದ ಸಬಲರಾಗಬೇಕು. ಬಡತನ ಮುಕ್ತ ಬದುಕು , ಸ್ವಾಭಿಮಾನದ ಬದುಕು ಬದುಕಬೇಕು ಎಂದರು.
ಜನ ಜಾಗೃತರಾಗಿದ್ದಾರೆ:
ಹಿಂದುಳಿದ ಸಮುದಾಯ ಜಾಗೃತವಾಗಿದೆ, ನಮ್ಮವರು ಯಾರು ಹೋರಾಟಕ್ಕೆ ಯಾರು ಬೆಲೆ ಕೊಡುತ್ತಾರೆ, ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ, ನಮ್ಮ ಧ್ವನಿಯನ್ನು ಕೇಳುತ್ತಾರೆ, ಯಾರು ನಮ್ಮ ಪರವಾಗಿ ಸಂಕಷ್ಟದಲ್ಲಿ ನಿಲ್ಲುತ್ತಾರೆ, ರಕ್ಷಣೆಯನ್ನು ಕೊಡುತ್ತಾರೆಯೋ ಅವರಿಗೆ ಮತ ನೀಡಬೇಕು ಎಂದರು.
ನಾಟಕ ನಡೆಯುವುದಿಲ್ಲ:
ಅಭಿವೃದ್ದಿ, ಶಿಕ್ಷಣ, ಉದ್ಯೋಗ ನಮ್ಮ ಹಕ್ಕುಗಳನ್ನ ಕೊಡುವವರು, ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಹೀಗಾಗಿ ನಮ್ಮ ಮುಂದೆ ಇನ್ನು ನಾಟಕ ನಡೆಯುವುದಿಲ್ಲ, ಬದಲಾವಣೆಯಾಗಿದೆ, ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನ ಜನಗಳು ಮಾಡಬೇಕು. ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ ಜಾಗೃತಿ ಮೂಡಿದೆ ಎಂದರು.
ರಾಜಕೀಯ ಇಚ್ಛಾಶಕ್ತಿಯಿಂದ ಮಾಡಿರುವ ತೀರ್ಮಾನದ ಲಾಭ ಪಡೆಯಬೇಕು. ಈ ವಿಚಾರವನ್ನು ಮನೆ ಮನೆಗೆ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಬೇಕು ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw