ಉದ್ವೇಗದಲ್ಲಿ ಕೆಟ್ಟ ಪದ ಬಳಸಿದ್ದೇನೆ, ತಪ್ಪಾಗಿದೆ ದಯವಿಟ್ಟು ಸಹಕರಿಸಿ | ಸಚಿವ ಮಾಧುಸ್ವಾಮಿ
ತುಮಕೂರು: ಉದ್ವೇಗದಲ್ಲಿ ಅಧಿಕಾರಿಗೆ ಕೆಟ್ಟ ಪದ ಬಳಕೆ ಮಾಡಿದ್ದೇನೆ. ನನ್ನಿಂದ ತಪ್ಪಾಗಿದೆ ಎಂದು ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಿದ್ದು, ಸಾಕಷ್ಟು ಬಾರಿ ಸಭೆಗಳಲ್ಲಿ ಸರ್ಕಾರದಿಂದ ಬರುವ ಹಣವನ್ನು ಬಳಸಿಕೊಂಡು ಜಿಲ್ಲಾಯ ಅಭಿವೃದ್ಧಿಗೆ ಒತ್ತು ನೀಡಿ ಎಂದು ಸೂಚನೆ ನೀಡಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿಲ್ಲಾ ತಮ್ಮ ಇಲಾಖೆಗಳ ಕೆಲಸಗಳ ಬಗ್ಗೆ ಕೇಳಿದರೂ ಉತ್ತರ ಸಿಗಲಿಲ್ಲ ಹೀಗಾಗಿ ತಾಳ್ಮೆ ಕಳೆದುಕೊಂಡು ಕೆಟ್ಟ ಪದ ಬಳಕೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗೆ ಕೆಟ್ಟ ಪದ ಬಳಕೆ ಮಾಡಿದ್ದ ಮಾಧುಸ್ವಾಮಿ ಅವರು, ಈ ಸಂಬಂಧ ಸ್ಪಷ್ಟನೆ ನೀಡಿದ್ದು, 2020-2021ರ 3ನೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ಬಗ್ಗೆ ಮಾತನಾಡಿ, ತುಮಕೂರು ಉಪ ವಿಭಾಗದಲ್ಲಿ 269 ಕೋಟಿ ಹಣವಿದೆ ಖರ್ಚು ಮಾಡಬೇಕಾಗಿದೆ. ಆದರೆ ಇದರಲ್ಲಿ ಕೇವಲ 86 ಲಕ್ಷ ಹಣವನ್ನು ಬಳಕೆ ಮಾಡಿಕೊಂಡು ಇದ್ದಾರೆ. ಇದರಿಂದ ಅವಧಿ ಮುಗಿದ ನಂತರ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಇದರಿಂದ ನಷ್ಟ ಯಾರಿಗೆ ಜನರಿಗಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಸಂದರ್ಭದಲ್ಲಿ ಹಲವು ಬಾರಿ ಹೇಳಿದರು ಅಧಿಕಾರಿಗಳು ಸರಿ ಹೋಗದೆ ಇದ್ದರೆ ಏನು ಮಾಡಲಿ, ಹಾಗಾಗಿ ನಾನು ಇಂದು ಅಧಿಕಾರಿಗಳ ವಿರುದ್ಧ ಕೆಟ್ಟ ಪದವನ್ನು ಬಳಸಿದ್ದೇನೆ ತಪ್ಪಾಗಿದೆ ದಯ ಮಾಡಿ ಮಾಧ್ಯಮಗಳು ಸಹಕರಿಸಿ ಎಂದರು.
ಜಿಲ್ಲಾ ಪರಿಷತ್ ಇಂಜಿಯರ್‍ಗಳು ಯಾರೂ ಕೆಲಸ ಮಾಡಿಲ್ಲ. ಕೇಳಿದರೆ ಹೋಗುತ್ತೇವೆ, ಮಾಡುತ್ತೇವೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಕಾಗದದಲ್ಲಿ ಸಿದ್ಧ ಮಾಡಿಕೊಂಡು ಬಂದಿರುತ್ತಾರೆ. ಆದರೆ ಎಲ್ಲಿ ಏನೇನೋ ಆಗಿದೆ ಹೇಳಿ, ಎಂದರೆ ಉತ್ತರ ಇಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಅಧಿಕಾರಿಗಳ ಮೇಲೆ ಅಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದ್ರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ಳುತ್ತಾರೆ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡರು.