ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ | ವಾಸ್ತವ ಒಪ್ಪಿಕೊಂಡ ಸಿಎಂ ಯಡಿಯೂರಪ್ಪ
09/01/2021
ಕೊಪ್ಪಳ: ನಾನು ನಿರೀಕ್ಷೆಯಂತೆ ಯಾವುದೇ ಕೆಲಸ ಮಾಡಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಕೊರೊನಾ ಅತಿವೃಷ್ಟಿ, ಬರಗಾಲಗಳ ಹೊಡೆತದಿಂದ ಯಾವ ಕೆಲಸಗಳನ್ನೂ ನಿರೀಕ್ಷೆಯಂತೆ ಮಾಡಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೊಪ್ಪಳದ ಬಸಾಪುರದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬ ವಾಸ್ತವ ತಿಳಿಸಿದ ಅವರು, ಬಜೆಟ್ ನಲ್ಲಿಯೂ 40-50 ಸಾವಿರ ಕೋಟಿ ಖೋತಾ ಆಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಯಾವಾಗ ಹೇಳುತ್ತದೋ ಆವಾಗ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.