ಬದಲಾವಣೆ ಬಯಸುವ ಕನಕಪುರದ ಜನತೆ: ಅರುಣ್ ಸಿಂಗ್ - Mahanayaka

ಬದಲಾವಣೆ ಬಯಸುವ ಕನಕಪುರದ ಜನತೆ: ಅರುಣ್ ಸಿಂಗ್

arun sigh
19/04/2023

ಕನಕಪುರ: ಕರ್ನಾಟಕದ ಎಲ್ಲ ಕಡೆ ಬಿಜೆಪಿ ಅಲೆ ಇದೆ. ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದರು.


Provided by

ಕನಕಪುರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಮತ್ತು ಸಚಿವ ಆರ್ ಅಶೋಕ್ ಅವರ ನಾಮಪತ್ರ ಸಲ್ಲಿಕೆ ವೇಳೆ ನೆರೆದಿದ್ದ ಅಪಾರ ಜನಸ್ತೋಮ ಬಿಜೆಪಿ ಗೆಲುವಿನ ಮೊದಲ ಹೆಜ್ಜೆಯಾಗಿ ಗೋಚರಿಸಿದೆ ಎಂದು ಅವರು ತಿಳಿಸಿದರು.
ಕನಕಪುರ ವಿಧಾನಸಭಾ ಕ್ಷೇತ್ರದ ಜನತೆಗೆ ಖಂಡಿತವಾಗಿ ಬದಲಾವಣೆಯೊಂದು ಬೇಕಾಗಿದೆ. ಕನಕಪುರದಲ್ಲಿ ಸೃಷ್ಟ್ಠಿಯಾಗಿರುವ ಅರಾಜಕತೆ ಹಾಗೂ ಭಯದ ವಿರುದ್ಧ ಸೆಟೆದು ನಿಲ್ಲುವ ಜನರ ಒತ್ತಾಸೆಗೆ ಪೂರಕವಾಗಿ ಇವತ್ತು ಸೇರಿದ ಜನಸಾಗರವೇ ಸಾಕ್ಷಿ ಎಂದು ಅವರು ಹೇಳಿದರು.

ಆರ್ ಅಶೋಕ್ ಅವರಲ್ಲಿ ಕನಕಪುರದ ಮತದಾರರು ಭರವಸೆಯನ್ನಿಟ್ಟಿದ್ದಾರೆ. ಅಲ್ಲಿನ ಜನರು, ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿ ಕನಕಪುರದಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸುವುದು ನಿಶ್ಚಿತ ಎಂದು ಅವರು ತಿಳಿಸಿದರು.


Provided by

ಅರುಣ್ ಸಿಂಗ್ ಅವರು ಇಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಸುವ ರೋಡ್ ಷೋದಲ್ಲಿ ಭಾಗವಹಿಸಿದ್ದರು. ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮತ್ತು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ