ಮಲಗಿದ್ದ ನಾಗನ ಮೇಲೆ ಹರಿದ ಕಾಳಿಂಗ ಸರ್ಪ! - Mahanayaka
6:29 PM Wednesday 15 - January 2025

ಮಲಗಿದ್ದ ನಾಗನ ಮೇಲೆ ಹರಿದ ಕಾಳಿಂಗ ಸರ್ಪ!

10/01/2021

ಚಿಕ್ಕಮಗಳೂರು: ಮಲಗ್ಗಿದ್ದ ನಾಗನ ಮೇಲೆ ಕಾಳಿಂಗ ಸರ್ಪ ಹರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿ ಎಂಬಲ್ಲಿ ಗ್ರಾಮದಲ್ಲಿ ನಡೆದಿದೆ.   ಅಷ್ಟಕ್ಕೂ ನಾಗ ಎಂದರೆ ಹಾವಲ್ಲ, ಇಲ್ಲಿನ ವ್ಯಕ್ತಿಯೊಬ್ಬರ ಹೆಸರಾಗಿದೆ. ನಾಗ ಎಂಬವರು ಮಲಗಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ ಅವರ ಮೇಲೆ ಹರಿದಿದೆ.

ರಾತ್ರಿ ಮಲಗಿದ್ದ ವೇಳೆ ನಾಗ ಅವರ ಮೈಯನ್ನು ತಣ್ಣಗಿನ ಯಾವುದೋ ವಸ್ತು ಸ್ಪರ್ಶಿಸಿದೆ. ಆಗ ನಿದ್ದೆಯಿಂದ ಎಚ್ಚರಗೊಂಡ ನಾಗ, ಕಪ್ಪು ಕಾಳಿಂಗ ಸರ್ಪ ಹರಿದಾಡುತ್ತಿರುವುದನ್ನು ಕಂಡು ಮನೆ ಮಂದಿಯನ್ನು ಎಬ್ಬಿಸಿದ್ದಾರೆ. ಈ ಕಾಳಿಂಗ ಸರ್ಪ 10 ಅಡಿ ಉದ್ದ ಇತ್ತು. ಈ ಸಂದರ್ಭ ಮನೆಯವರು ಏನು ಮಾಡಬೇಕು ಎಂದು ತೋಚದೇ ತಕ್ಷಣವೇ ಸ್ನೇಕ್ ಅರ್ಜುನ್ ಎಂಬವರನ್ನು ಮನೆಗೆ ಕರೆಸಿದ್ದಾರೆ.


ADS

ಸ್ಥಳಕ್ಕೆ ಆಗಮಿಸಿದ ಅರ್ಜುನ್ ಅವರು ತಕ್ಷಣವೇ ಕಾಳಿಂಗ ಸರ್ಪವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಮಲಗಿದ್ದ ಸಂದರ್ಭದಲ್ಲಿ ಸ್ವಲದರಲ್ಲಿ ನಾಗ ಅವರು ಕಾಳಿಂಗ ಸರ್ಪದಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ