ಜೆಸಿಬಿ ಮೇಲೆ ಕುಸಿದು ಬಿದ್ದ ಮಣ್ಣು: ಜೆಸಿಬಿ ಚಾಲಕ ಸ್ಥಳದಲ್ಲೇ ಸಾವು
ಜೆಸಿಬಿಯಿಂದ ಮಣ್ಣು ಅಗೆಯುವ ವೇಳೆ ಮಣ್ಣು ಕುಸಿದು ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಹೊರವಲಯದ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ಸಂಭವಿಸಿದೆ.
ಜೆಸಿಬಿಯ ಚಾಲಕ ಝಾರ್ಖಂಡ್ ಕೊಸಾರ್ ಅನ್ಸಾರಿ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿದ್ದು ಅದರಲ್ಲಿ ಜೆಸಿಬಿಯ ಚಾಲಕ ಸಿಲುಕಿಕೊಂಡಿದ್ದ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲಾಯಿತಾದರೂ, ಅದಾಗಲೇ ಚಾಲಕ ಮೃತಪಟ್ಟಿದ್ದರು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw