ಕೆನರಾ ಪ.ಪೂ. ಕಾಲೇಜಿನ ಎನ್‌.ಪ್ರತೀಕ್ ಮಲ್ಯಗೆ 600ರಲ್ಲಿ 595 ಅಂಕ - Mahanayaka
11:06 AM Thursday 12 - December 2024

ಕೆನರಾ ಪ.ಪೂ. ಕಾಲೇಜಿನ ಎನ್‌.ಪ್ರತೀಕ್ ಮಲ್ಯಗೆ 600ರಲ್ಲಿ 595 ಅಂಕ

prathik malya
22/04/2023

ಮಂಗಳೂರಿನ ಕೆನರಾ ಪ.ಪೂ. ಕಾಲೇಜಿನ ಬಿ.ಎಸ್. ಬಿ.ಎ. ವಾಣಿಜ್ಯ ವಿಭಾಗದ ವಿದ್ಯಾರ್ಥಿ, ಬಂಟ್ವಾಳ ನಿವಾಸಿ ಎನ್‌. ಪ್ರತೀಕ್ ಮಲ್ಯ ಅವರು 600ರಲ್ಲಿ 595 ಅಂಕಗಳಿಸಿ (ಶೇ.99.17) ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.

ಬಂಟ್ವಾಳ ತ್ಯಾಗರಾಜ ರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ,ಎನ್.ರಾಧಿಕಾ ಮಲ್ಯ ಅವರ ಪುತ್ರನಾಗಿರುವ ಪ್ರತೀಕ್ ಮಲ್ಯ ಅವರು ಸಂಸ್ಕೃತದಲ್ಲಿ 100, ಇಂಗ್ಲೀಷ್ ನಲ್ಲಿ 96, ಬಿಸಿನೆಸ್ ಸ್ಟಡಿಸ್ ನಲ್ಲಿ 99, ಅಕೌಂಟೆನ್ಸಿಯಲ್ಲಿ‌100, ಸ್ಟೆಟಟಿಕ್ಸ್ ನಲ್ಲಿ 100,ಗಣಿತ 100 ಅಂಕ ಗಳಿಸಿದ್ದಾನೆ.

ಬಂಟ್ವಾಳ‌ ಎಸ್.ವಿ.ಎಸ್.ದೇವಳ‌ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಸ್. ಎಸ್ .ಎಲ್ .ಸಿ ಪರೀಕ್ಷೆಯಲ್ಲು ಪ್ರತೀಕ್ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದ. ಇದೀಗ ಈ ಸಾಲಿನ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದು, ಫಲಿತಾಂಶ ಹೊರಬೀಳುತ್ತಿದ್ಧಂತೆ ತಾಯಿ ರಾಧಿಕಾ ಮಲ್ಯ ಅವರು ಮಗ ಪ್ರತೀಕ್ ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈತ ಭವಿಷ್ಯದಲ್ಲಿ ಸಿ.ಎ. ಆಗಬೇಕೆನ್ನುವ ಆಸೆಯನ್ನು ಹೊಂದಿರುವುದಾಗಿ ತಿಳಿಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ