ಪೂಂಚ್ ನಲ್ಲಿ ಉಗ್ರರ ದಾಳಿಗೊಳಗಾದ ಸೇನಾ ಟ್ರಕ್ ನಲ್ಲಿ ಇಫ್ತಾರ್ ಗಾಗಿ ಹಣ್ಣುಗಳನ್ನು ಸಾಗಿಸಲಾಗುತ್ತಿತ್ತು…
ಭಾರತೀಯ ಸೇನೆಯ ಟ್ರಕ್ ಮೇಲೆ ಗುರುವಾರ ನಡೆದ ದಾಳಿಯಿಂದ ರಾಷ್ಟ್ರೀಯ ರೈಫಲ್ಸ್ ನ ಐವರು ಸೈನಿಕರು ಹುತಾತ್ಮರಾಗಿದ್ದರು. ಭಯೋತ್ಪಾದಕ ದಾಳಿಗೀಡಾದ ಟ್ರಕ್ ನಲ್ಲಿ ಸೈನಿಕರು ಇಫ್ತಾರ್ ಕೂಟಕ್ಕಾಗಿ ಹಣ್ಣು ಹಾಗೂ ಇತರ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ವರದಿಯಾಗಿದೆ.
ದೇಶದ ಜನರು ಶನಿವಾರ ‘ಈದ್-ಉಲ್-ಫಿತರ್’ ಅನ್ನು ಆಚರಿಸುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಭಯತ್ಪಾದಕರ ದಾಳಿಯಲ್ಲಿ ಸೈನಿಕರು ಹುತಾತ್ಮರಾದ ಕಾರಣ ಹಳ್ಳಿಯೊಂದು ಈದ್ ಆಚರಿಸದೇ ಇರಲು ನಿರ್ಧರಿಸಿದೆ.
ಗುರಿಯೋಟ್ ಗ್ರಾಮಕ್ಕೆ ಹೊರಟಿದ್ದ ಭಾರತೀಯ ಸೇನೆಯ ಟ್ರಕ್ ಮೇಲೆ ಭಯೋತ್ಪಾದಕರು ಗುರುವಾರ ಹೊಂಚು ಹೂಡಿ ದಾಳಿ ನಡೆಸಿದ್ದರು. ಸಗಿಯೋಟ್ ನಲ್ಲಿ ನಡೆಯಲಿರುವ ಇಫ್ತಾರ್ ಕೂಟಕ್ಕಾಗಿ ಹಣ್ಣುಗಳು ಮತ್ತು ಇತರ ವಸ್ತುಗಳನ್ನು ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು.
ಮಧ್ಯಾಹ್ನ ಸುಮಾರು 3 ಗಂಟೆಗೆ ಟ್ರಕ್ ಗಮ್ಯ ಸ್ಥಾನವನ್ನು ತಲುಪುತ್ತಿದ್ದಂತೆಯೇ ಕೇವಲ 7ರಿಂದ 8 ಕಿ.ಮೀ. ದೂರದಲ್ಲಿ ತೋಟ ಗಲಿಯನ್ನು ದಾಟುತ್ತಿದ್ದಂತೆಯೇ ಭಯೋತ್ಪಾದಕರು ಟ್ರಕ್ ಮೇಲೆ ವಿವಿಧ ದಿಕ್ಕುಗಳಿಂದ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw