ಶಿವಮೊಗ್ಗ: ಪೋಸ್ಕೋ ಕಾಯ್ದೆ ಅಡಿ ವಿಚಾರಣಧೀನ ಖೈದಿಯಾಗಿದ್ದ ಆರೋಪಿ ಸಾವು: ಕೊಲೆ ಆರೋಪ!
ಶಿವಮೊಗ್ಗ: ಕಾರಾಗೃಹದಲ್ಲಿ ವಿಚಾರಣಧೀನ ಖೈದಿಯಾಗಿದ್ದ ಖಲೀಂ ಎಂಬ ಆರೋಪಿ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಮಾರು ಒಂದುವರೆ ತಿಂಗಳ ಹಿಂದೆ ಖಲೀಂ ಬಿನ್ ಅಬ್ದುಲ್ ಖಲೀಂ ಎಂಬ 37 ವರ್ಷದ ವ್ಯಕ್ತಿ ಪೋಸ್ಕೋ ಕಾಯ್ದೆ ಅಡಿ ಅಂದರ್ ಆಗಿದ್ದನು. ನಿನ್ಬೆ ಮೆಗ್ಗಾನ್ ಆಸ್ಪತ್ರೆಗೆ ಹೊಟ್ಟೆ ನೋವಿನಿಂದ ದಾಖಲಾಗಿದ್ದನು.
ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಆತನ ಕುಟುಂಬ ಜೈಲಿನಲ್ಲಿ ಹಲ್ಲೆ ನಡೆಸಿದೆ ಎಂದು ಆರೋಪಿಸಿದೆ. ಜೈಲಿನಲ್ಲಿ ಹಲ್ಲೆ ನಡೆಸಿ ಮೆಗ್ಗಾನ್ ಗೆ ದಾಖಲಿಸಿದ್ದಾರೆ ಎಂದು ಆರೋಪಿಸಿದೆ. ಈ ಬಗ್ಗೆ ದೂರು ದಾಖಲಿಸಲಾಗಿವುದು ಎಂದು ಆರೋಪಿಸಿದ್ದಾರೆ.
ಜೈಲಿನ ಕೋಣೆಯಲ್ಲಿ ಹಾಕಿಕೊಂಡು ಒದ್ದಿದ್ದಾರೆ. ಕಾಲಿನ ಮಂಡಿಯಿಂದ ಹೊಟ್ಟೆ ಮತ್ತು ಖಾಸಗಿ ಭಾಗಕ್ಕೆ ಒದ್ದಿದ್ದಾರೆ ಎಂಬದು ಸಹೋದರ
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಖಲೀಂ ಪೋಸ್ಕೋ ಕಾಯ್ದೆ ಅಡಿ ಶಿವಮೊಗ್ಗ ಕಾರಾಗೃಹದಲ್ಲಿ ದಾಖಲಾಗಿದ್ದನು.
ನೀರು ಹಿಡಿಯಲು ಹೋದಾಗ ಆಫ್ತಾಬ್ ಇರ್ಫಾನ್ ಮತ್ತಿತರು ಸೇರಿ ಹೊಡೆದಿದ್ದರು ಆತನ ವಿರುದ್ಧ.ದೊಡ್ಡಪೇಟೆಯಲ್ಲಿ ಪೋಸ್ಕೋ ದಾಖಲಾಗಿತ್ತು. ಗಲಾಟೆ ವೇಳೆ ಆರೋಪಿ ಹೊಟ್ಟೆಗೆ ಹೊಡೆಯಲಾಗಿತ್ತು. ಜೈಲಿಗೆ ತೆರಳಿದ ನಂತರ 15 ದಿನಗಳ ಹಿಂದೆ ಜೈಲಿನಲ್ಲಿ ಹೊಡೆದಿರುವುದಾಗಿ ಖಲೀಂ ಮೊಬೈಲ್ ಕರೆ ಮಾಡಿ ಹೇಳಿದ್ದ. ಆಗ ಹರೀಶ ಎಂಬ ಯುವಕ ಕರೆದುಕೊಂಡು ಬಂದು ತನ್ನ ಸೆಲ್ ನಲ್ಲಿ ರಕ್ಷಣೆ ನೀಡಿದ್ದ. ಖಲೀಂ ಗುರುತಿಸಿ ಹೇಳಿದರೂ ಜೈಲ್ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂಬುದು ಕುಟುಂಬ ಆರೋಪಿಸಿದೆ.
ಫೈಜಾನ್ ಎಂಬುವನನ್ನ ಜೈಲಿನಲ್ಲಿ 30 ಹುಡುಗರನ್ನ ಸೇರಿಸಿಕೊಂಡು ಹಲ್ಲೆ ನಡೆಸಿದ್ದಾನೆ. ಪೋಸ್ಕೋ ಸಂತ್ರಸ್ತೆಯ ಕುಟುಂಬ ಖಲೀಂಜೈಲಿಗೆ ಹೋದಾಗ ಫೈಜಾನ್ ಗೆ ಇಂತಹ ವ್ಯಕ್ತಿ ಜೈಲಿಗೆ ಬರ್ತಾ ಇದ್ದಾನೆ ಆತನನ್ನ ನೋಡಿಕೊ ಎಂದು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆದಿರುವುದಾಗಿ ಕುಟುಂಬ ಆರೋಪಿಸಿದ್ದಾರೆ.
ವಕೀಲ ಶಾರಾಜ್ ಸಿದ್ದೀಕಿ ಮಾತನಾಡಿ ಜೈಲ್ ಸಿಬ್ಬಂದಿಗಳ ನಿರ್ಲಕ್ಷ ಮತ್ತು ಸಂತ್ರಸ್ತೆ ಕುಟುಂಬದ ಹುನ್ನಾರದಿಂದ ಖಲೀಂ ಸಾವನ್ನಪ್ಪಿದ್ದಾನೆ. ಆತನ ಸಾವು ಸಾವಲ್ಲ ಅದು ಕೊಲೆ ಯಾಗಿದೆ. ಹಾಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw