ನೇಣು ಹಾಕಿಕೊಳ್ಳಲು ಮುಂದಾದ ಜೋಡಿ: ಪ್ರಿಯತಮೆ ನಿಂತಿದ್ದ ಚೇರ್ ತಳ್ಳಿ ಕೊಂದ ಪ್ರಿಯಕರ!

ಬೆಂಗಳೂರು: ಅನೈತಿಕ ಸಂಬಂಧದ ಹೊಂದಿದ್ದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಸರವಣ (35) ಎಂದು ಗುರುತಿಸಲಾಗಿದೆ.
ಈಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಸಹ ಗಣೇಶ್ (22) ಎಂಬ ಯುವಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈಕೆ ಯುವಕನಿಗೆ 50 ಸಾವಿರ ರೂ. ಹಣ ಹಾಗೂ ಒಂದು ಮನೆಯನ್ನೂ ಸಹ ಮಾಡಿಕೊಟ್ಟಿದ್ದಳು.
ಇಷ್ಟೆಲ್ಲಾ ಇದ್ದರೂ ಗಣೇಶ್ ಬೇರೆ ಹುಡುಗಿಯೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದನ್ನು . ಈ ವಿಷಯ ತಿಳಿದ ಸರವಣ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ.
ಇದರಿಂದಾಗಿ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಇಬ್ಬರೂ ನೇಣು ಹಾಕಿಕೊಳ್ಳುತ್ತೇನೆಂದು ನಂಬಿಸಿ ಪರಸ್ಪರ ಕುಣಿಕೆ ಬಿಗಿದಾಗ ಚೇರನ್ನು ಗಣೇಶ್ ತಳ್ಳಿದಾಗ ಸರವಣಯ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw