ನಾನು ಮೀನು ಮುಟ್ಟಿದ್ದೇನೆ… ದೇವಸ್ಥಾನದೊಳಗೆ ಬರಬಹುದೇ?: ರಾಹುಲ್ ಗಾಂಧಿ ಪ್ರಶ್ನೆ
ಉಡುಪಿ: ನಾನು ಮೀನು ಮುಟ್ಟಿದ್ದೇನೆ… ದೇವಸ್ಥಾನದೊಳಗೆ ಬರಬಹುದೇ? ಎಂದು ದೇವಸ್ಥಾನದ ಹೊರಗೆಯೇ ನಿಂತು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ ಘಟನೆ ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿ ನಡೆದಿದೆ.
ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೀನುಗಾರರು ರಾಹುಲ್ ಗಾಂಧಿ ಅವರಿಗೆ ದೊಡ್ಡ ಗಾತ್ರದ ಅಂಜಲ್ ಮೀನನ್ನು ಕೊಡುಗೆಯಾಗಿ ನೀಡಿದ್ದರು. ಈ ಮೀನನ್ನು ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ ಅವರು, ಮೀನುಗಾರ ಮಹಿಳೆಯರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದರು.
ಇದಾದ ಬಳಿಕ ಮಹಾಲಕ್ಷ್ಮೀ ದೇವಸ್ಥಾನದ ಒಳಗೆ ಅವರು ನೇರವಾಗಿ ಆಗಮಿಸಿದ್ದಾರೆ. ಈ ವೇಳೆ ಕೈ ತೊಳೆಯಲು ನೀರಿಗಾಗಿ ಹುಡುಕಾಡಿದ್ದು, ನಾನು ಮೀನು ಮುಟ್ಟಿದ್ದೇನೆ, ದೇವಸ್ಥಾನದೊಳಗೆ ಬರಬಹುದೇ ಎಂದು ಮೀನುಗಾರರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮೀನುಗಾರ ಮುಖಂಡರು, ಯಾವುದೇ ಅಭ್ಯಂತರವಿಲ್ಲ ಬನ್ನಿ ಎಂದಿದ್ದಾರೆ.
ಇನ್ನೂ ಮುಖಂಡರು ಕರೆದರೂ ದೇವಸ್ಥಾನದೊಳಗೆ ಪ್ರವೇಶಿಸಲು ರಾಹುಲ್ ಸಾಕಷ್ಟು ಯೋಚಿಸಿದ್ದಾರೆ, ಬಳಿಕ ಪ್ರಾಂಗಣದಲ್ಲೇ ನಿಂತು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಪ್ರಸಾದ ಸ್ವೀಕರಿಸಲು ಕೂಡ ತಡವರಿಸಿದ್ದು, ಪ್ರಸಾದ ಸ್ವೀಕರಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ಪ್ರಸಾದ ಸ್ವೀಕರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw