ಪ್ರೀತಿಯಲ್ಲಿ ಬಿದ್ದ 9ನೇ ತರಗತಿಯ ಹುಡುಗ-ಹುಡುಗಿ ಮನೆ ಬಿಟ್ಟು ಪರಾರಿ!
ಗುಜರಾತಿನ ಛಾನಿಯಲ್ಲಿ 9ನೇ ತರಗತಿಯಲ್ಲಿ ಕಲಿಯುತಿರುವ ಅಪ್ರಾಪ್ತ ವಯಸ್ಸಿನ ಇಬ್ಬರು ಮನೆಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿದ್ದರಿಂದ ಇಬ್ಬರಿಗೂ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಜೊತೆಯಾಗಿರಬೇಕು ಎಂದು ನಿರ್ಧರಿಸಿ, ಡಿಸೆಂಬರ್ 28ರಂದು ಮನೆ ಬಿಟ್ಟು ಪರಾರಿಯಾಗಿದ್ದಾರೆ.
ಇವರಿಬ್ಬರು ಹಾಗೆಯೇ ಓಡಿ ಹೋಗಿದ್ದರೆ, ಇಷ್ಟೆಲ್ಲ ವಿವಾದಗಳು ನಡೆಯುತ್ತಿರಲಿಲ್ಲ. ಹುಡುಗ ದೇವಸ್ಥಾನದಿಂದ 25 ಸಾವಿರ ರೂಪಾಯಿ ಕದ್ದು ಓಡಿದ್ದು, ಹುಡುಗಿ ಮನೆಯಲ್ಲಿದ್ದ 5 ಸಾವಿರ ರೂಪಾಯಿಯನ್ನು ಕದ್ದು ಓಡಿ ಹೋಗಿದ್ದಾಳೆ.
ಹೀಗೆ ಓಡಿ ಹೋದ ಜೋಡಿ, ಬಾಡಿಗೆ ಮನೆಯೊಂದರಲ್ಲಿ ಸಯಾಜಿಗುಂಜ್ ಗೆ ಹೋಗಿದ್ದಾರೆ. ಅಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿದ್ದಾರೆ. ಹುಡುಗ ಬಟ್ಟೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದ. ಆತನಿಗೆ ದಿನಕ್ಕೆ 366 ರೂ. ಸಂಬಳ ಸಿಗುತ್ತಿತ್ತು. ಈ ನಡುವೆ ಹುಡುಗ-ಹುಡುಗಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಲವು ದಿನಗಳು ಕಳೆದ ಬಳಿಕ ಹುಡುಗ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದನೆನ್ನಲಾಗಿದೆ. ಈ ವಿಚಾರ ತಿಳಿಯುತ್ತಿದಂತೆಯೇ ಪೊಲೀಸರು ಸ್ನೇಹಿತರನ್ನು ವಿಚಾರಣೆ ಮಾಡಿ, ಇಬ್ಬರನ್ನೂ ಪತ್ತೆ ಮಾಡಿದ್ದಾರೆ.
ಇನ್ನೂ, ಪೊಲೀಸರು ಜೋಡಿಯನ್ನು ವಿಚಾರಣೆ ನಡೆಸಿದಾಗ, ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದಿದ್ದಾಗ ಓಡಿ ಹೋಗಿದ್ದೇವೆ ಎಂದು ಹೇಳಿದ್ದಾರೆ.