ಅಮಿತ್ ಶಾ ಸಮಾವೇಶದಲ್ಲಿ ಕೂಲ್ ಡ್ರಿಂಕ್ಸ್ ದೋಚಿದ ಕಾರ್ಯಕರ್ತರು: ಮಾನವೀಯತೆ ಮೆರೆದ ಸಂಸದ ಪ್ರತಾಪ್ ಸಿಂಹ
ಬೆಂಗಳೂರು: ಅಮಿತ್ ಶಾ ಸಮಾವೇಶದ ವೇಳೆ ಬಿಜೆಪಿ ಕಾರ್ಯಕರ್ತರ ಗುಂಪು ತಂಪು ಪಾನೀಯ ವಾಹನದ ಮೇಲೆ ಮುಗಿ ಬಿದ್ದು, ಪಾನೀಯ ದೋಚಿದ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಸಂಕಷ್ಟ ಅನುಭವಿಸಿದ್ದ ವ್ಯಾಪಾರಿಗೆ ಆಗಿರುವ ನಷ್ಟವನ್ನು ಭರಿಸುವ ಮೂಲಕ ಸಂಸದ ಪ್ರತಾಪ್ ಸಿಂಹ ಮಾನವೀಯತೆ ಮೆರೆದಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಸಮಾವೇಶದ ವೇಳೆ ಕಾರ್ಯಕರ್ತರ ಗುಂಪೊಂದು ತಂಪು ಪಾನೀಯ ವಾಹನದ ಮೇಲೆ ಬಿದ್ದು, ಪಾನೀಯ ದೋಚಿತ್ತು. ಇದರಿಂದಾಗಿ ವ್ಯಾಪಾರಿ ಹಸನ್ ಸಾಬ್ ಎಂಬವರಿಗೆ ತೀವ್ರ ನಷ್ಟವಾಗಿತ್ತು. ಘಟನೆಯಿಂದ ನೊಂದ ಅವರು ಕಣ್ಣೀರು ಹಾಕಿದ್ದರು.
ಈ ಸುದ್ದಿ ತಿಳಿದ ಪ್ರತಾಪ್ ಸಿಂಹ ಅವರು, ಸಮೀರ್ ಹಸನ್ ಸಾಬ್ ಅವರಿಗೆ 35 ಸಾವಿರ ರೂಪಾಯಿ ಹಣವನ್ನು ನೀಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸ್ಟ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಜೊತೆಗೆ ಸಮೀರ್ ಹಸನ್ ಸಾಬ್ ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw