ಜೋಳದ ರೊಟ್ಟಿ ಸೇವನೆಯಿಂದ ಎಷ್ಟೆಲ್ಲ ಪ್ರಯೋಜನ ಇದೆ ನೋಡಿ
ಅತೀ ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ ಜೋಳದ ರೊಟ್ಟಿ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಜೋಳದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಅತ್ಯಧಿಕವಾಗಿದೆ. ಆದ್ದರಿಂದ ಇದರಿಂದ ಮಾಡಿದ ಆಹಾರಗಳನ್ನು ತಿಂದ ತಕ್ಷಣ ದೇಹಕ್ಕೆ ಶಕ್ತಿ ಬರುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೂ ಹೊಟ್ಟೆ ತುಂಬುತ್ತದೆ. ಇದರಲ್ಲಿರುವ ಅಮಿನೋ ಆಮ್ಲ ದೇಹಕ್ಕೆ ಹೆಚ್ಚು ಪ್ರೋಟೀನ್ ಅನ್ನು ಒದಗಿಸುತ್ತದೆ.
ಗೋಧಿಯಿಂದ ಮಾಡಿದ ತಿನಿಸುಗಳಿಗಿಂತ ಜೋಳದಿಂದ ಮಾಡಿದ ತಿನಿಸುಗಳು ತುಂಬಾ ಸುಲಭವಾಗಿ ಮತ್ತು ಬೇಗನೆ ಜೀರ್ಣವಾಗುತ್ತದೆ. ಮಲಬದ್ಧತೆಯ ಸಮಸ್ಯೆ ಇರುವವರು ಪ್ರತಿದಿನ ಜೋಳದ ರೊಟ್ಟಿಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು.
ಜೋಳದ ರೊಟ್ಟಿಯಲ್ಲಿರುವ ಪೈಟೋ ಪೌಷ್ಟಿಕಾಂಶ ಹೃದಯದ ತೊಂದರೆಗಳನ್ನು ದೂರವಿಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಖನಿಜಾಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ರೊಟ್ಟಿಯನ್ನು ಬೆಂಕಿಯಲ್ಲಿ ಸುಟ್ಟು ಮಾಡುವ ಕಾರಣ ಇದರಲ್ಲಿ ಕಬ್ಬಿಣಾಂಶವು ಹೆಚ್ಚಿರುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಇದು ಉತ್ತಮ.
ಮಹಿಳೆಯರು ಋತುಬಂಧ ಸಮಯಕ್ಕಿಂತ ಮೊದಲು ಜೋಳದ ರೊಟ್ಟಿ ಅಥವಾ ಅದರಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಹಾರ್ಮೋನ್ ಗಳ ಅಸಮತೋಲನವನ್ನು ತಡೆಯಬಹುದು, ಜೊತೆಗೆ ಸ್ತನ ಕ್ಯಾನ್ಸರ್ ತಡೆಯಲು ಕೂಡ ಜೋಳದ ರೊಟ್ಟಿ ಪರಿಣಾಮಕಾರಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw