ಇಲಿ ಕಚ್ಚಿದ ಮಹಿಳೆಗೆ 60 ಸಾವಿರ ಪರಿಹಾರ ನೀಡುವಂತೆ ಚಿತ್ರಮಂದಿರಕ್ಕೆ ಸೂಚನೆ ನೀಡಿದ ಗ್ರಾಹಕ ನ್ಯಾಯಾಲಯ!
ಗುವಾಹಟಿ: ಸಿನಿಮಾ ನೋಡುತ್ತಿದ್ದ ವೇಳೆ ಚಿತ್ರ ಮಂದಿರದಲ್ಲಿ ಮಹಿಳೆಯೊಬ್ಬರಿಗೆ ಇಲಿ ಕಚ್ಚಿದ್ದು, ಇದೀಗ ಚಿತ್ರ ಮಂದಿರವು ಮಹಿಳೆಗೆ 60 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯವು ಸೂಚನೆ ನೀಡಿದೆ.
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿನ ಚಿತ್ರಮಂದಿರಲ್ಲಿ 50 ವರ್ಷದ ಮಹಿಳೆ 2018 ಅಕ್ಟೋಬರ್ 20 ರಂದು ಮಹಿಳೆ ಚಿತ್ರವೊಂದರ ವೀಕ್ಷಣೆಗಾಗಿ ರಾತ್ರಿ 9 ಗಂಟೆಯ ಪ್ರದರ್ಶನಕ್ಕೆ ತೆರಳಿದ್ದರು. ಈ ವೇಳೆ ಅವರ ಕಾಲಿಗೆ ಏನೋ ಕಚ್ಚಿದಂತಾಗಿದ್ದು, ತೀವ್ರ ರಕ್ತಸ್ರಾವಗೊಂಡ ಕಾರಣ ಅವರು ಚಿತ್ರಮಂದಿರದಿಂದ ಹೊರಗೆ ಓಡಿ ಬಂದಿದ್ದರು.
ಘಟನೆ ನಡೆದಾಗ ಚಿತ್ರಮಂದಿರದವರು ಮಹಿಳೆಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡಿಲ್ಲ, ಆಸ್ಪತ್ರೆಗೆ ಸೇರಿಸಲಿಲ್ಲ ಕೊನೆಗೆ ಅವರೇ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಆಕೆಗೆ ಏನು ಕಚ್ಚಿದೆ ಎಂದು ವೈದ್ಯರಿಗೆ ಖಚಿತವಾಗದಿದ್ದರಿಂದ ಆಕೆಯನ್ನು ಎರಡು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿತ್ತು. ಬಳಿಕ ಇಲಿ ಕಚ್ಚಿರುವುದು ತಿಳಿದ ನಂತರ ಚಿಕಿತ್ಸೆ ನೀಡಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಇಲಿ ಕಚ್ಚಿದ ಮಹಿಳೆಗೆ ಮಾನಸಿಕ ಯಾತನೆಯ ಪರಿಹಾರವಾಗಿ ರೂ. 40,000 ಮತ್ತು ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ರೂ. 20,000 ನೀಡುವಂತೆ ಕಾಮ್ರೂಪ್ ನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಭಾಂಗಗಢ್ನ ಗಲೇರಿಯಾ ಚಿತ್ರಮಂದಿರಕ್ಕೆ ನಿರ್ದೇಶಿಸಿದೆ, ಜೊತೆಗೆ ವೈದ್ಯಕೀಯ ಬಿಲ್ನ ಮರುಪಾವತಿ 2,282 ರೂ. ಮತ್ತು ವೆಚ್ಚದ ಪ್ರಕ್ರಿಯೆಯಾಗಿ ರೂ. 5,000 ಪಾವತಿಸುವಂತೆ ನಿರ್ದೇಶನ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw