ಮಲ್ಪೆ ಬಂದರ್ ನಲ್ಲಿ ಮೀನುಗಾರರಿಗೆ ಸಿಕ್ಕಿತು ಬೃಹದಾಕಾರದ ಮೀನು
21/10/2020
ಉಡುಪಿ: ಮಲ್ಪೆ ಬಂದರ್ ನಲ್ಲಿ ಬೃಹದಾಕಾರದ ಮೀನೊಂದನ್ನು ನೋಡಲು ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಮಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಹೆಸರಿನಂತೆ ಇದು ತೊರಕೆ ಮೀನಾಗಿದೆ. ಇದರ ಭಾರೀ ಗಾತ್ರವನ್ನು ನೋಡಿ ಜನರು ಅಚ್ಚರಿಯಿಂದ ಫೋಟೋ ತೆಗೆದುಕೊಳ್ಳುವುದರಲ್ಲಿ ಬಿಝಿಯಾದರು.
ಮೀನುಗಾರರಿಗೆ ಸಿಕ್ಕಿರುವ ಮೀನುಗಳ ಪೈಕಿ ಒಂದು 750 ಕೆ.ಜಿ. ಇದ್ದರೆ, ಇನ್ನೊಂದು 250 ಕೆ.ಜಿ. ತೂಕ ಇತ್ತು. ಸ್ಥಳೀಯರು ಇದನ್ನು ಕೊಂಬು ತೊರಕೆ ಎಂದೂ ಕರೆಯುತ್ತಾರಂತೆ.
ಬೃಹತ್ ಆಕಾರದ ಮೀನುಗಳು ಸಿಕ್ಕಿವೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಹೋಗಿ ಫೋಟೋ ತೆಗೆದುಕೊಂಡಿದ್ದಾರೆ.