ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ವೇಳೆ ಕೈಕೊಟ್ಟ ವಿದ್ಯುತ್: ಭದ್ರತೆ ನೀಡಲು ಪರದಾಡಿದ ಸಿಬ್ಬಂದಿ
ಭುವನೇಶ್ವರ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುತ್ತಿದ್ದ ವೇಳೆ ವಿದ್ಯುತ್ ಕಡಿತವಾಗಿದ್ದು, ಪರಿಣಾಮವಾಗಿ 9 ನಿಮಿಷಗಳ ಕಾಲ ಭದ್ರತಾ ಸಿಬ್ಬಂದಿ ರಾಷ್ಟ್ರಪತಿಗೆ ಭದ್ರತೆ ನೀಡಲು ಪರದಾಡಿದ ಘಟನೆ ನಡೆದಿದೆ.
ಒಡಿಶಾದ ಬರಿಪಾದದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ದ್ರೌಪದಿ ಮುರ್ಮು ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಕಡಿತಗೊಂಡಿದೆ.
ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಮಂದ ಬೆಳಕಿನಲ್ಲೇ ಭಾಷಣ ಮುಂದುವರಿಸಿದರು. ಈ ವೇಳೆ ದ್ರೌಪದಿ ಮುರ್ಮು ಅವರಿಗೆ ಭದ್ರತೆ ನೀಡಲು ಸಿಬ್ಬಂದಿ ಪರದಾಡಿದ್ದಾರೆ. ಈ ಘಟನೆ ಒಡಿಶಾ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸಿದೆ.
ಬ್ಯಾಕಪ್ ಜನರೇಟರ್ ಗಳ ವ್ಯವಸ್ಥೆ ಇದ್ದರೂ ಕೂಡ, ತಾಂತ್ರಿಕ ದೋಷ ಉಂಟಾದ ಪರಿಣಾಮ ಈ ಘಟನೆ ನಡೆದಿದೆ. ಈ ವೈಫಲ್ಯಕ್ಕಾಗಿ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದೆ ಎಂದು ಇಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw