ಹಣ ಮಾಡಲು ಶಿವರಾಜ್ ಕುಮಾರ್ ಚುನಾವಣೆ ಪ್ರಚಾರ | ಪ್ರಶಾಂತ್ ಸಂಬರಗಿ ಆರೋಪದ ವಿರುದ್ಧ ಬಜರಂಗಿ ಗರಂ
ಹುಬ್ಬಳ್ಳಿ: ಹಣಕ್ಕಾಗಿ ನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಆರೋಪಿಸಿದ್ದು, ಈ ಬಗ್ಗೆ ಪತ್ರಕರ್ತರು ಶಿವರಾಜ್ ಕುಮಾರ್ ಅವರನ್ನು ಪ್ರಶ್ನಿದಾಗ ಪ್ರಶಾಂತ್ ಸಂಬರಗಿ ವಿರುದ್ಧ ಶಿವರಾಜ್ ಕುಮಾರ್ ಕಿಡಿಕಾರಿದ್ದಾರೆ.
ಆ ಮಾತನ್ನು ಸಂಬರಗಿ ವಾಪಸ್ ಪಡೆಯಬೇಕು. ಹಾಗೆ ಮಾತನಾಡುವುದು ಸರಿಯಲ್ಲ, ನನ್ನ ಬಳಿ ಹಣವಿಲ್ವಾ? ನಾನು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಹಣ ಪಡೆದು ಇಲ್ಲಿಗೆ ಬಂದಿಲ್ಲ, ಹೃದಯದಿಂದ ಬಂದಿದ್ದೇನೆ, ವ್ಯಕ್ತಿಗಾಗಿ ಬಂದಿದ್ದೇನೆ. ನಾನು ಇಲ್ಲಿ ಜಗದೀಶ್ ಶೆಟ್ಟರ್ ಪರವಾಗಿ ಮಾತನಾಡಿದ್ದೇನೆ. ಬೇರೆ ಯಾರ ವಿರುದ್ಧವೂ ಮಾತನಾಡಿಲ್ಲ, ನಾನು ಮಾತನಾಡಿದ್ದೇನಾ? ಎಂದು ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿ ಗರಂ ಆದರು.
ನಾನು ಹಣ ಮಾಡಲು ಬಂದಿದ್ದೇನಾ? ನನ್ನಲ್ಲಿ ಹಣ ಇಲ್ವಾ? ಎಂದು ಪ್ರಶ್ನಿಸಿದ ಅವರು ಪ್ರಶಾಂತ್ ಸಂಬರಗಿ ಆರೋಪದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw