ಬಿಳಿ ಬಣ್ಣದ ಹಾವನ್ನು ಕಂಡು ಸಾರ್ವಜನಿಕರಿಗೆ ಶಾಕ್!: ಏನಿದು ಅಚ್ಚರಿಯ ಘಟನೆ? - Mahanayaka
3:53 PM Thursday 12 - December 2024

ಬಿಳಿ ಬಣ್ಣದ ಹಾವನ್ನು ಕಂಡು ಸಾರ್ವಜನಿಕರಿಗೆ ಶಾಕ್!: ಏನಿದು ಅಚ್ಚರಿಯ ಘಟನೆ?

white cobra
06/05/2023

ಚೆನ್ನೈ:  ಕೊಯಮತ್ತೂರಿನ ವಸತಿ ಪ್ರದೇಶವೊಂದರಲ್ಲಿ ಬಿಳಿ ಬಣ್ಣದ ಅಪರೂಪದ ಹಾವೊಂದು ಪತ್ತೆಯಾಗಿದ್ದು, ಈ ಹಾವನ್ನು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್‌ ನ ಸ್ವಯಂ ಸೇವಕರು ರಕ್ಷಿಸಿದ್ದು, ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕುರಿಚಿ ಪ್ರದೇಶದ ನಿವಾಸಿಗಳು ಬಿಳಿ ಹಾವನ್ನು ಕಂಡು ಅಚ್ಚರಿಗೀಡಾಗಿದ್ದು, ಅವರು ತಕ್ಷಣವೇ ಪರಿಸರ ಕಾರ್ಯಕರ್ತರನ್ನು ಸಂಪರ್ಕಿಸಿ ಈ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್‌ ನ ಸ್ವಯಂ ಸೇವಕರು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಬಿಳಿ ನಾಗರಹಾವು ಅತ್ಯಂತ ಅಪರೂಪವಾಗಿದ್ದು, ಆನುವಂಶಿಕ ರೂಪಾಂತರದಿಂದಾಗಿ ಅದು ಬಿಳಿಬಣ್ಣದಲ್ಲಿ ಕಾಣುತ್ತದೆ.  ಸಾಮಾನ್ಯವಾಗಿ ಅಲ್ಬಿನೋಸ್ ಎಂದೂ ಕರೆಯುತ್ತಾರೆ. ಈ ಹಾವು ಬೇರೆ ಹಾವುಗಳಷ್ಟೇ ವಿಷಕಾರಿಯಾಗಿದ್ದು, ಈ ಹಾವನ್ನು ಸೆರೆ ಹಿಡಿಯಬೇಕಾದರೆ, ಅತ್ಯಂತ ಎಚ್ಚರಿಕೆ ವಹಿಸಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ