ಸುದೀಪ್ 3 ತಾಸಿನ ನಾಯಕ, ನಾವು ನಿಜವಾದ ನಾಯಕರು: ಸತೀಶ್ ಜಾರಕಿಹೊಳಿ
ಚಾಮರಾಜನಗರ: ಬಹಿರಂಗ ಪ್ರಚಾರದ ಕೊನೆದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕೈ ನಾಯಕರಾದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸಿದರು.
ಇನ್ನು, ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುಧ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ, ಅಳಲು-ನಗಲು ದುಡ್ಡು ತೆಗೆದುಕೊಳ್ಳುವವರು ಅವರು, ಜನ ಸೇವೆ ಮಾಡುವವರಲ್ಲ, ಅವರು 3 ತಾಸಿನ ನಾಯಕರು ಎಂದು ಟೀಕಿಸಿದರು.
ನಿರಂತರವಾಗಿ ಜೊತೆಗಿರುವ ನಾಯಕರು ನಾವು, ಮಳೆ-ಬಿಸಿಲಲ್ಲಿ ನಿಮ್ಮ ಸೇವೆ ಮಾಡುವವರು ನಾವು, ಅವರು ಬಂದರು ಎಂಬುದು ಪರಿಹಾರ ಅಲ್ಲ, ಗಣೇಶ್ ಪ್ರಸಾದ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇತ್ತೀಚಿಗಷ್ಟೇ ನಟ ಸುದೀಪ್ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಧೂಳೆಬ್ಬಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw