ಎಸ್.ಎಸ್.ಎಲ್.ಸಿ ಫಲಿತಾಂಶ: ಗಡಿಜಿಲ್ಲೆ ಚಾಮರಾಜನಗರಕ್ಕೆ 7ನೇ ಸ್ಥಾನ

ಚಾಮರಾಜನಗರ: 2022-23ರ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಚಾಮರಾಜನಗರ ಜಿಲ್ಲೆಗೆ ಶೇ. 93.92ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ ಜಿಲ್ಲೆಯು 7ನೇ ಸ್ಥಾನ ಪಡೆದುಕೊಂಡಿದೆ.
5524 ಬಾಲಕರು, 5622 ಬಾಲಕಿಯರು ಸೇರಿದಂತೆ ಒಟ್ಟು 11146 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರ ಪೈಕಿ 5086 ಬಾಲಕರು, 5328 ಬಾಲಕಿಯರು ಸೇರಿದಂತೆ ಒಟ್ಟು 10468 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ. 93.92 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಕಳೆದ ಬಾರಿಗಿಂತ ಶೇ. 2ರಷ್ಟು ಫಲಿತಾಂಶ ಏರಿಕೆಯಾಗಿದೆ. ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ 7ನೇ ಸ್ಥಾನಕ್ಕೆ ಏರಿದೆ.
ಕನ್ನಡ ಮಾಧ್ಯಮ ಫಲಿತಾಂಶವು ಶೇ.92.10ರಷ್ಟಿದ್ದರೆ, ಆಂಗ್ಲ ಮಾಧ್ಯಮ ಫಲಿತಾಂಶವು ಶೇ. 97.88 ರಷ್ಟಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 94.08ರಷ್ಟು, ನಗರ ಪ್ರದೇಶದ ವಿದ್ಯಾರ್ಥಿಗಳು ಶೇ. 93.63ರಷ್ಟು ತೇರ್ಗಡೆ ಹೊಂದಿದ್ದಾರೆ. ಶಾಲಾವಾರು ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೇ. 93.50 ರಷ್ಟು, ಅನುದಾನಿತ ಶಾಲೆಗಳು ಶೇ. 91.28ರಷ್ಟು, ಅನುದಾನ ರಹಿತ ಶಾಲೆಗಳು ಶೇ. 97.74ರಷ್ಟು ಫಲಿತಾಂಶ ಪಡೆದಿವೆ.
ಕೊಳ್ಳೇಗಾಲ ಶೇ. 98.09ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಯಳಂದೂರು ಶೇ. 96.26ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹನೂರು ಶೇ. 95.03ರಷ್ಟು ಫಲಿತಾಂಶದೊಂದಿಗೆ ಮೂರನೇ ಸ್ಥಾನದಲ್ಲಿದೆ. ಗುಂಡ್ಲುಪೇಟೆ ಶೇ. 93.20ರಷ್ಟು ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಹಾಗೂ ಚಾಮರಾಜನಗರ ಶೇ. 50.80ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಒಟ್ಟು 49 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಇದರಲ್ಲಿ ಸರ್ಕಾರಿ ಶಾಲೆಗಳು 14, ಅನುದಾನಿತ ಶಾಲೆಗಳು 9 ಹಾಗೂ ಅನುದಾನ ರಹಿತ ಶಾಲೆಗಳು 26 ಇವೆ.
ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಶ್ರೀಜಾ. ಜೆ.ಬಿ, ಪಲ್ಲವಿ ಕೆ. ಹಾಗೂ ನಿಸರ್ಗ ಶಾಲೆಯ ತೇಜಸ್ವಿನಿ ಆರ್. ಅವರು 619 ಗರಿಷ್ಠ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಮಂಜುನಾಥ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw