ಬಲರಾಮನಿಗೆ ಕಣ್ಣೀರಿನ ವಿದಾಯ: 14 ಬಾರಿ ಅಂಬಾರಿ ಹೊತ್ತ ಸ್ನೇಹ ಜೀವಿ ಬಲರಾಮ ಇನ್ನು ನೆನಪು ಮಾತ್ರ

ಮೈಸೂರು: 14 ಬಾರಿ ದಸರಾ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಬಲರಾಮನಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.
ಹಲವು ದಿನಗಳಿಂದ ಆಹಾರ, ನೀರು ಸೇವಿಸಲಾಗದೇ ಬಲರಾಮ ಕಂಗೆಟ್ಟಿದ್ದ. ಏನೇ ಸೇವಿಸಿದರೂ ವಾಂತಿಯಾಗುತ್ತಿತ್ತು. ಪಶುವೈದ್ಯರು ಪರಿಶೀಲಿಸಿದಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು, ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ ಬಳಿಕವೂ ಬಲರಾಮ ಚೇತರಿಸಿಕೊಳ್ಳಲಿಲ್ಲ. ಹೀಗಾಗಿ ಎಂಡೋಸ್ಕೋಪಿ ಮಾಡಿ ಮಾದರಿ ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಿದಾಗ ಬಲರಾಮನಿಗೆ ಕ್ಷಯ ರೋಗ ಇರುವುದು ತಿಳಿದು ಬಂದಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ಬಲರಾಮ ಆಹಾರ, ನೀರು ಸೇವಿಸಲು ಸಾಧ್ಯವಾಗದೇ ಕೊನೆಯುಸಿರೆಳೆದಿದ್ದಾನೆ.
ಬಲರಾಮ ಶಕ್ತಿಶಾಲಿ ಆನೆಯಾಗಿದ್ದರೂ ಸೌಮ್ಯ ಸ್ವಭಾವದವನಾಗಿದ್ದ. ತನ್ನ ಜೀವಿತಾವಧಿಯಲ್ಲಿ ಯಾರಿಗೂ ಆತ ತೊಂದರೆ ನೀಡಿರಲಿಲ್ಲ. ಚಿಕ್ಕ ಚಿಕ್ಕ ಆನೆಗಳಿಗೆ ತರಬೇತಿ ನೀಡುವುದರಲ್ಲಿ ನಿಸ್ಸೀಮನಾಗಿದ್ದ ಬಲರಾಮ, ಚಿಕ್ಕ ಆನೆಗಳನ್ನು ಪ್ರೀತಿಯಿಂದ ನೋಡುತ್ತಿದ್ದನಂತೆ.
ಬಲರಾಮನ ಅಂತ್ಯ ಸಂಸ್ಕಾರದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಅತ್ಯಂತ ಭಾವುಕರಾಗಿದ್ದರು. ಕೆಲವರಂತೂ ಬಲರಾಮನನ್ನು ನೆನೆದು ಗದ್ಗದಿತರಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw