ಟೆಕ್ಸಾಸ್ ಮಾಲ್ ನಲ್ಲಿ ಶೂಟೌಟ್: ತೆಲಂಗಾಣದ ಜಡ್ಜ್ ಪುತ್ರಿ ಸಾವು
ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಅಲೆನ್ ನ ಮಾಲ್ ಒಂದರಲ್ಲಿ ಶನಿವಾರ ನಡೆದ ಶೂಟ್ ಔಟ್ ನಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ನರ್ಸಿ ರೆಡ್ಡಿ ಅವರ ಪುತ್ರಿ ಕೂಡ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಾಟಿಕೊಂಡ ಐಶ್ವರ್ಯ ರೆಡ್ಡಿ(27) ಮೃತಪಟ್ಟವರಾಗಿದ್ದು, ಇವರು ಕಳೆದ 5 ವರ್ಷಗಳಿಂದಲೂ ಟೆಕ್ಸಾಸ್ ನಲ್ಲಿ ನೆಲೆಸಿದ್ದರು. ಒಸ್ಮಾನಿಯಾ ವಿವಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಅವರು, 2020ರಲ್ಲಿ ಅಮೆರಿಕದ ಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದಿಂದ ನಿರ್ಮಾಣ ನಿರ್ವಹಣೆಯಲ್ಲಿ ಎಂಎಸ್ ಪೂರ್ಣಗೊಳಿಸಿದರು. ನಂತರ ಟೆಕ್ಸಾಸ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಶನಿವಾರ ಅಲೆನ್ ನ ಮಾಲ್‌ಗೆ ತೆರಳಿದ್ದ ವೇಳೆ, ಅಪರಿಚಿತ ಬಂದೂಕುಧಾರಿಯೊಬ್ಬನಿಂದ ನಡೆದ ಗುಂಡಿನ ದಾಳಿಯಲ್ಲಿ ಅಸುನೀಗಿದ್ದಾರೆ. ಈ ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಐಶ್ವರ್ಯ ರೆಡ್ಡಿ ಕೂಡ ಸೇರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw