6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರ
ಕೊಲ್ಹಾಪುರ: 6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿರುವ ಘಟನೆ ನಡೆದಿದ್ದು, ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ.
ಆರು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಆಕೆಯ ಮೂರು ವರ್ಷದ ಮಗಳೊಂದಿಗೆ ಅಸ್ಸಾಂನಿಂದ ಅಪಹರಿಸಲಾಗಿದೆ. ಮತ್ತು ಬರುವ ಮಾತ್ರೆ ಪಾನೀಯದಲ್ಲಿ ಬೆರೆಸಿ ಕುಡಿಸಿದ ಬಳಿಕ ಗರ್ಭಿಣಿಯನ್ನು ಅಪಹರಿಸಲಾಗಿತ್ತು. ಅಸ್ಸಾಂನಿಂದ ಮಹಿಳೆಯನ್ನು ಅಪಹರಿಸಿ ರಾಜಸ್ಥಾನದ ತಹಸೀಲ್ ಪಂಚಗಾವ್ ಗ್ರಾಮಕ್ಕೆ ಕೊಂಡೊಯ್ದ ಆರೋಪಿಗಳು, ಅತ್ಯಾಚಾರ ಎಸಗಿದ್ದು, ಬಳಿಕ ಆರೋಪಿಗಳಲ್ಲಿ ಓರ್ವ ಆಕೆಯನ್ನು ಮದುವೆಯಾಗಿದ್ದಾನೆ. ಅಲ್ಲದೇ, ಬೇರೆ ಪುರುಷರ ಜೊತೆಗೆ ಕೂಡ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹಾಕಿದ್ದಾರೆ. ಮಹಿಳೆ ವಿರೋಧಿಸಿದಾಗ ಮೂರು ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಸಿ, ಹಲ್ಲೆ ನಡೆಸಿದ್ದಾರೆ.
ಆರೋಪಿಗಳಿಂದ ಹೇಗೋ ತಪ್ಪಿಸಿಕೊಂಡ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಕೋಲೇಕರ್ ನಡೆಸುತ್ತಿದ್ದು, ಬಂಧಿಸಲ್ಪಟ್ಟಿರುವ ಅತ್ಯಾಚಾರಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 5 ದಿನಗಳ ನ್ಯಾಯಾಂಗ ಬಂಧಿನ ವಿಧಿಸಿದೆ.