ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮೊದಲು ಆರಂಭವಾಯ್ತು ಬೆಟ್ಟಿಂಗ್ ದಂಧೆ: ಬೆಟ್ಟಿಂಗ್ ಗಾಗಿ 1 ಎಕರೆ ಜಮೀನು ಮಾರಾಟಕ್ಕೆ ಮುಂದಾದ ವ್ಯಕ್ತಿ

ಮೈಸೂರು: ಕರ್ನಾಟಕ ವಿಧಾನ ಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲು ಬೆಟ್ಟಿಂಗ್ ದಂಧೆ ಸದ್ದು ರಾಜ್ಯದಲ್ಲಿ ಜೋರಾಗಿಯೇ ಕೇಳಿ ಬಂದಿದೆ. ಸಾಕಷ್ಟು ಜನ ಹಣ, ಸೈಟ್ ಮೊದಲಾದವುಗಳನ್ನು ಇಟ್ಟು ಬೆಟ್ಟಿಂಗ್ ನಲ್ಲಿ ತೊಡಗಿದ್ದಾರೆನ್ನಲಾಗ್ತಿದೆ. ಆದ್ರೆ ಇಲ್ಲೊಬ್ಬರು ಬೆಟ್ಟಿಂಗ್ ಗಾಗಿ ತನ್ನ ಜಮೀನನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.
ಹೌದು..! ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ ಅವರು ಜಮೀನು ಮಾರಾಟ ಮುಂದಾದವರಾಗಿದ್ದಾರೆ. ಇವರು ಕಾಂಗ್ರೆಸ್ ಮುಖಂಡರು ಎಂದು ವರದಿಯಾಗಿದೆ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಹಾಗೂ ಜೆಡಿಎಸ್ ನ ಅಭ್ಯರ್ಥಿ ಕೆ.ಮಹದೇವ್ ನಡುವೆ ಭಾರೀ ಪೈಪೋಟಿ ಇದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಯೋಗೇಶ್ ಗೌಡ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಬೆಟ್ಟಿಂಗ್ ಗೆ ಜನರನ್ನು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw