ದಟ್ಟಪೊದೆಯ ಬಳಿ ಈ ಶಿಲಾಶಾಸನ ಪತ್ತೆ: ಹೇಗಿದೆ ಈ ಶಿಲಾಶಾಸನ?
ಉಡುಪಿಯ ಉದ್ಯಾವರದ ಪಿತ್ರೋಡಿಯ ಮೋಹನ್ ಸಾಲ್ಯಾನ್ ರವರ ಗದ್ದೆಯಪಕ್ಕದಲ್ಲಿ ಕಲಾಯಿ ಬೈಲ್ ನ ಬಳಿ ದಟ್ಟಪೊದೆಯ ಬಳಿ ಈ ಶಿಲಾಶಾಸನ ಇವರ ಮಾಹಿತಿಯನ್ನು ಸ್ಥಳೀಯರಾದ ಆಟೋ ಚಾಲಕರಾದ ಉಪೇಂದ್ರ ಮೆಂಡನ್ ಅವರ ಮಾಹಿತಿ ನೀಡಿರಿರುವ ಹಿನ್ನೆಲೆಯ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು. ಹಾಗೂ ರಾಜೇಶ್ ಪ್ರಭು ಪರ್ಕಳ ರವರು ಸ್ಥಳಕ್ಕೆ ಭೇಟಿನೀಡಿ ಅಲ್ಲಿಯ ಪ್ರದೇಶವನ್ನು ಶಾಸನ ಪರಿಶೀಲನೆ ನಡೆಸಿದಾಗ ಶಾಸನ ಇರುವುದು ಪತ್ತೆಯಾಗಿದೆ.
ಶಾಸನದಲ್ಲಿ ಸೂರ್ಯ, ಚಂದ್ರ, ಮಧ್ಯೆ ದೊಡ್ಡ ಗಾತ್ರದ ಲಿಂಗ ಕುಳಿತು ಕೊಂಡಿರುವ ಬಸವ.ಜೊತೆಗೆ ಕೆಳಗಡೆ ಬರಹ ಇರುವುದು ಗೋಚರಿಸುತ್ತದೆ.ಎರಡು ಫೀಟು ಅಗಲ ಐದು ಫೀಟು ಎತ್ತರ ಈ ಶಾಸನ ನೆಲದಲ್ಲಿ ಹುದುಗಿದೆ. ಪಕ್ಕದಲ್ಲಿ ಎರಡು ನಾಗಬನ ಇದೆ ಶಾಸನದ ಎದುರುಗಡೆ ವಿಶಾಲವಾದ “ಪೇರಳೆ” ನಾಮಾಂಕಿತ ಡೊಡ್ಡಕೆರೆಇದೆ. ಪಕ್ಕದಲ್ಲಿ ದತ್ತಾತ್ರೇಯಯ ಭಜನಾ ಮಂಡಳಿಯ ವಾರ್ಷಿಕೋತ್ಸವ ದಂದು ಓಕುಳಿಯಾಡಿ ಈ ಪೇರಳೆ ಕೆರೆಯಲ್ಲಿ ಸ್ನಾನ ಮಾಡುವುದು ವಾಡಿಕೆ.ನಾಗಬನದಲ್ಲಿ ಸೌರ ಮಾನಯುಗಾದಿಯಂದು ಸ್ಥಳೀಯರು ಬಂದು ಪೂಜೆ ಮಾಡುತ್ತಾರೆ.
ಈ ಭಾಗದಲ್ಲಿ ಶಾಸನ ಇಲ್ಲಿರೋ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ತಿಳಿದುಬಂದಿದೆ. ಸಂಶೋಧಕರಿಗೆ ಮಾಹಿತಿ ನೀಡಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw