ಮತ ಎಣಿಕೆಗೆ ಕಾತರ... ಚಾಮರಾಜನಗರದ 3 ಕಡೆ ಕೈ-ಕಮಲ ಬಿಗ್ ಫೈಟ್ - Mahanayaka
1:09 PM Thursday 12 - December 2024

ಮತ ಎಣಿಕೆಗೆ ಕಾತರ… ಚಾಮರಾಜನಗರದ 3 ಕಡೆ ಕೈ-ಕಮಲ ಬಿಗ್ ಫೈಟ್

election counting
13/05/2023

ಚಾಮರಾಜನಗರ: ಚುನಾವಣೆ ಮುಗಿದು ಮತ‌ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ಬೆಳಗ್ಗೆ 8 ರಿಂದ ಚಾಮರಾಜನಗರ ಹೊರವಲಯದ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ‌‌.

ಚಾಮರಾಜನಗರದಲ್ಲಿ ಬಿಜೆಪಿ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ ನ ಸಿ‌.ಪುಟ್ಟರಂಗಶೆಟ್ಟಿ ನಡುವೆ ನೇರಾ ಹಣಾಹಣಿ ನಡೆದಿದ್ದು ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಹಾಗೂ ಬಿಜೆಪಿಯ ಎನ್‌.ಮಹೇಶ್, ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಕಾಂಗ್ರೆಸ್ ನ ಗಣೇಶ್ ಪ್ರಸಾದ್ ಬಿಗ್ ಫೈಟ್ ನಡೆಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ನ ಎಂ.ಆರ್.ಮಂಜುನಾಥ್, ಕಾಂಗ್ರೆಸ್ ನ ಆರ್.ನರೇಂದ್ರ ಹಾಗೂ ಬಿಜೆಪಿಯಿಂದ ಡಾ.ಪ್ರೀತನ್ ಕುಮಾರ್ ಕಾದಾಟ ನಡೆಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಎಷ್ಟು ಸುತ್ತಿನ‌ ಮತ ಎಣಿಕೆ..?

ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಬೆಳಗ್ಗೆ 8 ಗಂಟೆಗೆ ಅಂಚೆಮತ ಪತ್ರ ಎಣಿಕೆ ಮೂಲಕ ಕೌಂಟಿಂಗ್ ಆರಂಭವಾಗಲಿದೆ.

ಪೋಸ್ಟಲ್ ಬ್ಯಾಲೆಟ್ ಎಣಿಕೆ ಕಾರ್ಯವು 2 ಟೇಬಲ್‍ಗಳಲ್ಲಿ ನಡೆಯಲಿದೆ. ಇಟಿಪಿಬಿಎಸ್ ಮತ ಎಣಿಕೆಗೆ 1 ಟೇಬಲ್ ಇರಲಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 18 ಸುತ್ತಿನಲ್ಲಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 14 ಟೇಬಲ್(ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ತಲಾ ಓರ್ವ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆದಾರರು ಹಾಗೂ ಓರ್ವ ಮೈಕ್ರೋ ಅಬ್ಸರ್‍ವರ್ ಇರಲಿದ್ದಾರೆ.

ಮತದಾನ ಪ್ರಮಾಣ

ಚಾಮರಾಜನಗರ ಜಿಲ್ಲೆಯಲ್ಲಿ ಶೇ 81.70 ರಷ್ಟು ಮತದಾನವಾಗಿದೆ, ಜಿಲ್ಲೆಯಲ್ಲಿ ಒಟ್ಟು 8,61,489 ಮತದಾರರಿದ್ದು ಇವರಲ್ಲಿ 4,26,547 ಪುರುಷರು, 4,34,873 ಮಹಿಳೆಯರು, ಇತರರು 69 ಮಂದಿ ಇದ್ದಾರೆ. ಈ ಪೈಕಿ 3,51,642 ಪುರುಷರು, 3,52,179 ಮಹಿಳೆಯರು, 14 ಇತರೆ ಮಂದಿ ಸೇರಿದಂತೆ ಒಟ್ಟು 7,03,835 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 80.86 ರಷ್ಟು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.75 ರಷ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.95 ರಷ್ಟು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 87.33 ರಷ್ಟು ಮತದಾನವಾಗಿದೆ.

ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೈ ಭದ್ರಕೋಟೆ ಮುಂದುವರೆಯುವುದೋ ಇಲ್ಲವೇ ಕಮಲ ಹೆಚ್ಚು ಅರಳುವುದೋ, ತೆನೆ ಹೊತ್ತ ಮಹಿಳೆಗೆ ಸಿಹಿ ಸಿಗಲಿದೆಯಾ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

 


► ಮತ ಎಣಿಕೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ:

► ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹಣೆಬರೆಹ ಇಂದು ಬಹಿರಂಗ

► ಚಾಮರಾಜನಗರದಲ್ಲಿ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಮತ ಎಣಿಕೆಎಲ್ಲರ ಚಿತ್ತ ಸ್ರ್ಟಾಂಗ್ ರೂಂ ನತ್ತ- ಕೆಲವೇ ಕ್ಷಣಗಳಲ್ಲಿ ಅಂಚೆ ಮತ ಪತ್ರ ಎಣಿಕೆ ಆರಂಭ

► ಡಿಸಿ, ಎಸ್ಪಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆಗೆದು ಮತ ಎಣಿಕೆ ಕಾರ್ಯ ಆರಂಭ


►ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಿ.ಪುಟ್ಟರಂಗಶೆಟ್ಟಿ

►ಚಾಮರಾಜನಗರ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಕೈ ಅಭ್ಯರ್ಥಿ ಎಂಟ್ರಿ

►ಕೆಲವೇ ಕ್ಷಣಗಳಲ್ಲಿ ತೆರೆಯಲಿರುವ ಸ್ಟ್ರಾಂಗ್ ರೂಂ

►ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣಗೆ ಬಿಗ್ ಪೈಟ್ ಕೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ