ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ ಎನ್.ಮಹೇಶ್: ಕ್ಷೇತ್ರದ ಜತೆಗೆ ಹೇಳಿದಿಷ್ಟು…
ಮಾಜಿ ಸಚಿವ ಕೊಳ್ಳೇಗಾಲದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಅವರು ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ, ಗೆಲುವು ಪಡೆದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಚುನಾವಣೆಯಲ್ಲಿ ಕೊಳ್ಳೇಗಾಲದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ. ಕಾಂಗ್ರೆಸ್ ಪಕ್ಷದ ಎ.ಆರ್.ಕೃಷ್ಣಮೂರ್ತಿ ಅವರು, ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ್ದಾರೆ.ಅವರಿಗೆ ಕೊಳ್ಳೇಗಾಲದ ಮಹಾಜನತೆ ಆಶೀರ್ವಾದ ಮಾಡಿದ್ದೀರಿ… ಕೃಷ್ಣಮೂರ್ತಿಯವರಿಗೆ ನಾನು ಅಭಿನಂದನೆಗಳನ್ನು ಹೇಳ್ತಿದ್ದೇನೆ ಎಂದರು.
ಈ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿದೆ, ಸೋಲಾಗಿದೆ. ಇದು ಕೊಳ್ಳೇಗಾಲದ ಮಹಾಜನತೆಯ ತೀರ್ಪು, ಆ ತೀರ್ಪನ್ನು ನಾನು ಗೌರವಯುತವಾಗಿ ನಾನು ಸ್ವಾಗತ ಮಾಡ್ತೀನಿ. ಕೊಳ್ಳೇಗಾಲದ ಅಭಿವೃದ್ಧಿ ಕಡೆಗೆ ಕೃಷ್ಣಮೂರ್ತಿಯವರು ಹೆಚ್ಚಿನ ಗಮನ ಕೊಡಲಿ, ನಾನು ಮಾಡಿರುವ ಕೆಲಸಗಳನ್ನು ಪೂರ್ತಿ ಮಾಡಲಿ. ಕೊಳ್ಳೇಗಾಲದ ಕಾನೂನು ಸುವ್ಯವಸ್ಥೆಯನ್ನ ಕಾಪಾಡಲಿ ಮತ್ತು ವಿಧಾನಸಭೆಯಲ್ಲಿ ಕೊಳ್ಳೇಗಾಲದ ಪ್ರತಿನಿಧಿಯಾಗಿ, ಚರ್ಚೆಯಲ್ಲಿ ಭಾಗವಹಿಸಿ, ಕೊಳ್ಳೇಗಾಲ ಹಾಗೂ ರಾಜ್ಯದ ಜನರನ್ನು ಪ್ರತಿನಿಧಿಸಲಿ ಎಂದು ಹಾರೈಸಿದರು.
ಮುಂದಿನ ದಿನಗಳಲ್ಲಿ ನನಗೆ ವೋಟ್ ಹಾಕಿರುವಂತಹ ಬಂಧುಗಳ ಕಷ್ಟ ಸುಖದಲ್ಲಿ ನಾನು ಸದಾ ನಿಮ್ಮ ಜೊತೆ ಇರ್ತಿನಿ. ಒಟ್ಟಾರೆ ಈ ಜನತೆಯ ತೀರ್ಪು ಜನಾರ್ದನನ ತೀರ್ಪು ಎಂದು ನಂಬಿರುವ ನಾನು ಸದಾ ನಿಮ್ಮ ಜೊತೆಗಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw