ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯುತರ ಕ್ಷೇತ್ರ, ಸಿ.ಟಿ.ರವಿ ಕ್ಷೇತ್ರ ಖಾಲಿ ಮಾಡ್ಬೇಕಾಗುತ್ತೆ: ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು: ಸಿ.ಟಿ.ರವಿ ಸೋಲನ್ನ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪರೋಕ್ಷವಾಗಿ ಸಂಭ್ರಮಿಸಿ ವ್ಯಂಗ್ಯವಾಡಿದ್ದಾರೆ.
ಸಿ.ಟಿ.ರವಿ ನನ್ನನ್ನ ಬಿಜೆಪಿಯಿಂದ ಕಳಿಸಿದ್ರು, ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು. ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯುತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಕಂಡ್ ಹೋದ್ರು ಇನ್ಮುಂದೆ ಆಗಲ್ಲ. ನಿನ್ನೆಯಿಂದ ಅದು ವೀರಶೈವ ಲಿಂಗಾಯುತರ ಕ್ಷೇತ್ರ ಎಂದು ಅವರು ಹೇಳಿದರು.
ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೆ. ಯಡಿಯೂರಪ್ಪ ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿ 50 ಸೀಟ್ ಅಷ್ಟೆ ಬರ್ತಿತ್ತು ಎಂದು ಅವರು ಹೇಳಿದರು.
ಸಿ.ಟಿ.ರವಿ ನನ್ನ ಬಿಜೆಪಿಯಿಂದ ಖಾಲಿ ಮಾಡಿಸಿದ್ರು, ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು. ನನ್ನನ್ನ ಬಿಟ್ಟಿದ್ದಕ್ಕೆ ಐದು ಕ್ಷೇತ್ರ ಹೋಗುತ್ತೆ ಅಂತ ಸಾಮಾನ್ಯ ಜನ ಹೇಳ್ತಾರೆ. ಜೆಡಿಎಸ್ ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡ್ತೀವಿ ಎಂದರು.
ಮೂಡಿಗೆರೆಯಲ್ಲಿ ಬಿಜೆಪಿಗೆ ಜೀವ ತುಂಬಿದವನೇ ನಾನು ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಎಂ.ಪಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw