ಯತ್ನಾಳ್ ಎದುರೇ ಬಿಜೆಪಿ ಮುಖಂಡನನ್ನು ಆಸ್ಪತ್ರೆಯಿಂದ ಹೊರ ಹಾಕಿದ ಪುತ್ತಿಲ ಪರ ಬೆಂಬಲಿಗರು!
ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿರೋ ಹಿಂದೂ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಭೇಟಿ ನೀಡಿದ್ರು.
ಯತ್ನಾಳ್ ಭೇಟಿ ವೇಳೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ಭಾರೀ ಹೈಡ್ರಾಮಾ ನಡೆಯಿತು. ಬಿಜೆಪಿ ಮುಖಂಡನೋರ್ವನನ್ನು ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಕಾರ್ಯಕರ್ತರು ತಳ್ಳಿದ ಘಟನೆ ನಡೆದಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎದುರಲ್ಲೇ ಈ ಘಟನೆ ನಡೆಯಿತು.
ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನ ಬಿಜೆಪಿ ಕಾರ್ಯಕರ್ತರು ನೋಡಬೇಡಿ ಎಂದು ತಳ್ಳಿದ ಪುತ್ತಿಲ ಕಾರ್ಯಕರ್ತರು ತಳ್ಳಿದ್ದು, ಪುತ್ತಿಲ ಟೀಂ ಬಸರಾಜ್ ಪಾಟೀಲ್ ಯತ್ನಲ್ ಗೆ ಮಾತ್ರ ಹಿಂದೂ ಕಾರ್ಯಕರ್ತರನ್ನು ನೋಡಲು ಎಂಟ್ರಿ ನೀಡಿತು.
ಗೊಂದಲ ಸರಿ ಮಾಡುವ ಕೆಲಸ ಮಾಡುವೆ ಎಂದ ಯತ್ನಾಳ್:
ಇನ್ನೂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೇ ವೇಳೆ ಮಾತನಾಡಿ, ಈ ಘಟನೆಯ ವಾಸ್ತವಿಕ ತನಿಖೆಯಾಗಬೇಕು. ಊಹಾಪೋಹಗಳನ್ನು ಮಾಡಿ ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಲಿ. ಯಾರೋ ಒತ್ತಡ ಹಾಕಿದರೆಂದು ಈ ರೀತಿ ಕೆಲಸ ಮಾಡಬಾರದು. ನಾಳೆ ಕಾಂಗ್ರೆಸ್ ನವರು ಕೊಲೆ ಮಾಡಿ ಎಂದರೆ ಪೋಲೀಸರು ಕೊಲೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ಬಂದ ಬಳಿಕ ಕೆಲವು ಪೊಲೀಸ್ ಅಧಿಕಾರಿಗಳು ಈ ರೀತಿ ನಡೆದುಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ವಿಧಾನಸಭೆಯಲ್ಲಿ ಇಂತಹ ವಿಚಾರಗಳನ್ನು ಕೈಗೆತ್ತಿಕೊಳ್ಳುವೆ. ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೊಂಚ ಅಸಮಾಧಾನ ಎದ್ದಿದೆ. ಹಿಂದೂ ಕಾರ್ಯಕರ್ತರು ಪಕ್ಷೇತರರ ಜೊತೆ ಹೋಗಿದ್ದಾರೆ. ಹಾಗೆಂದು ಅವರು ಬಿಜೆಪಿ ಕಾರ್ಯಕರ್ತರೇ. ಗೊಂದಲವನ್ನು ಸರಿ ಮಾಡುವ ಕೆಲಸವನ್ನು ಕೇಂದ್ರ ನಾಯಕರು ಮಾಡಲಿದ್ದಾರೆ. ಈ ವಿಚಾರವನ್ನು ಕೇಂದ್ರ ನಾಯಕರಿಗೆ ಮುಟ್ಟಿಸುವ ಕೆಲಸ ಮಾಡುವೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw