ನೂತನ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್: ಶಿಕ್ಷಕ ಅಮಾನತು
ಚಿತ್ರದುರ್ಗ: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಪೋಸ್ಟ್ ಬರೆದ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೋರ್ವನನ್ನು ಅಮಾನತು ಮಾಡಲಾಗಿದೆ.
ಕಾನುಬೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅಮಾನತಾದ ಶಿಕ್ಷಕನಾಗಿದ್ದು, ಬಿಇಓ ಎಲ್.ಜಯಪ್ಪನವರು ಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕ ಶಾಂತಮೂರ್ತಿ, ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಎನ್ನಲಾಗಿದೆ.
ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ 3590 ಕೋಟಿ ರು, ಧರ್ಮಸಿಂಗ್ 15,635 ಕೋಟಿ ರು, ಎಚ್.ಡಿ ಕುಮಾರಸ್ವಾಮಿ 3,545 ಕೋಟಿ ರು, ಬಿಎಸ್‌ವೈ 25,653ಕೋಟಿ ರು, ಸದಾನಂದ ಗೌಡ 9,464 ಕೋಟಿ ರು, ಜಗದೀಶ್ ಶೆಟ್ಟರ್ 13,464 ಕೋಟಿ ರು, ಸಿದ್ದರಾಮಯ್ಯ 2,42,000 ಕೋಟಿ ರು. ಎಸ್.ಎಂ ಕೃಷ್ಣ ಅವರಿಂದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರು. ಹಾಗೂ ಸಿದ್ದು ಮಾಡಿದ ಸಾಲ 2,42,000 ಕೋಟಿ ರು. ಇದ್ದು, ಬಿಟ್ಟಿಭಾಗ್ಯ ಕೊಡದೆ ಇನ್ನೇನು ಎಂದು ಶಿಕ್ಷಕ ಬರೆದುಕೊಂಡಿದ್ದ ಎನ್ನಲಾಗಿದೆ.
ಸರ್ಕಾರಿ ನೌಕರನಾಗಿದ್ದರೂ ಸರ್ಕಾರದ ವಿರುದ್ಧವೇ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಬಂದಿದ್ದು, ಚಿತ್ರದುರ್ಗ ಡಿಡಿಪಿಐ ಆದೇಶದಂತೆ ಅಮಾನತು ಆದೇಶ ಹೊರಡಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw