ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿ ವಿಕೃತಿ ಮೆರೆದ ಕಾಂಗ್ರೆಸ್ ಕಾರ್ಯಕರ್ತರು
ಬೆಂಗಳೂರು: ನೂತನ ಸರ್ಕಾರದ ರಚನೆಯ ನಂತರ ಮೊದಲ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸುವ ಮೂಲಕ 40% ಕಮಿಷನ್ ಸರ್ಕಾರದ ಪಾಪ ತೊಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆಯೇ ಪೂಜಾರಿಯೊಬ್ಬರು ಗೋ ಮೂತ್ರ ಸಿಂಪಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಮಗೂ ಬಿಜೆಪಿ ಸರ್ಕಾರಕ್ಕೂ ಏನು ವ್ಯತ್ಯಾಸ? ಇಷ್ಟು ದಿನ ಗೋ ಮೂತ್ರ ಟೀಕಿಸಿದ್ದೇಕೆ ಎಂದು ಹಲವು ಕಿಡಿಕಾರಿದ್ದಾರೆ.
ಇವ್ಯಾವೋ ಗೋಮೂತ್ರ ಹಾಕಿದ್ರೆ ಪರಿಶುದ್ಧ ಆಗುತ್ತಾ? ಬ್ರಾಹ್ಮಣ್ಯ ತಾಂಡವವಾಡುತ್ತಿದೆ ಈ ಪೆದ್ದರ ತಲೆಯೊಳಗೆ. ಸರಿಯಾಗಿ ಆಡಳಿತ ಮಾಡಬೇಕು. ಆಗಲೇ ಭ್ರಷ್ಟಾಚಾರ ಮಟ್ಟ ಹಾಕೋಕೆ ಸಾಧ್ಯ. ಹೋಮ ಹವನ ಮಾಡಿಸಿ ಚುನಾವಣೆಗೆ ನಿಂತೋರು ಎಷ್ಟೋ ಜನ ಮಣ್ಣು ಮುಕ್ಕಿದ್ದಾರೆ. ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಗೆದ್ದೋರು ಇದ್ದಾರೆ, ಬುದ್ದಿ ಕಲೀರೋ ದಡ್ಡರ ಎಂದು ಟೀಕಿಸಿದ್ದು ಇನ್ನು ಇತರೆ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw