ಚಿಕ್ಕಮಗಳೂರು: ಮಲೆನಾಡಿನಲ್ಲಿ ಗುಡುಗು ಮಿಂಚಿನ ಅಬ್ಬರ, ಗಾಳಿ ಮಳೆಗೆ ಜನ ತತ್ತರ!
ಚಿಕ್ಕಮಗಳೂರು: ಭಾರೀ ಮಳೆಗೆ ಮಲೆನಾಡು ಭಾಗ ತತ್ತರಿಸಿ ಹೋಗಿದ್ದು, ಕಳಸ, ಶೃಂಗೇರಿ, ಕೊಪ್ಪ, ಜಯಪುರ ಭಾಗದಲ್ಲಿ ಭಾರೀ ಮಳೆಯಾಗಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಭರ್ಜರಿ ಮಳೆಯಾಗಿದೆ.
ಮಿಂಚು ಗುಡುಗಿನ ಆರ್ಭಟ, ಒಂದೆಡೆಯಾದರೆ, ಮತ್ತೊಂದೆಡೆಯಲ್ಲಿ ಜೋರಾಗಿ ಬೀಸುತ್ತಿದ್ದ ಗಾಳಿಗೆ ಸಾರ್ವಜನಿಕರು ಆತಂಕಕ್ಕೀಡಾದರು.
ಕಾರಿನ ಮೇಲೆ ಬಿದ್ದ ಮರ:
ಶೃಂಗೇರಿಯಲ್ಲಿ ಭಾರೀ ಗಾಳಿ– ಮಳೆಯ ಅಬ್ಬರಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್ ಘಟನೆಯ ವೇಳೆ ಕಾರಿನಲ್ಲಿ ಯಾರೂ ಇರಲಿಲ್ಲ.
ತೋಟಕ್ಕೆ ಜನರನ್ನ ಕರೆದೊಯ್ಯುವ ಓಮ್ನಿ ಕಾರು ಇದಾಗಿದ್ದು, ಮಧ್ಯಾಹ್ನ ಊಟಕ್ಕೆ ಬಂದಿದ್ದರಿಂದ ಕಾರಿನಲ್ಲಿ ಯಾರೂ ಇರಲಿಲ್ಲ. ಕಾರಿನ ಮೇಲೆ ಮರ ಬಿದ್ದಿದ್ದರಿಂದ ಶೃಂಗೇರಿ–ಚಿಕ್ಕಮಗಳೂರು ರಸ್ತೆ ಕೆಲ ಕಾಲ ಬಂದ್ ಆಗಿತ್ತು. ಘಟನೆ ವೇಳೆ ಕಾರಿನಲ್ಲಿ ಜನ ಇದ್ದಿದ್ದರೆ ದಡ್ಡ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ಕಾರು ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವರಿಗೆ ಸೇರಿದ ಕಾರಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw