ಅಕ್ಕ ಐಎಎಸ್ ಅಕಾಡೆಮಿಯ ನಾಲ್ಕು ಅಭ್ಯರ್ಥಿಗಳಿಗೆ Rank
ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್ ಸಿ) ಪರೀಕ್ಷೆಯಲ್ಲಿ ಅಕ್ಕ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಾಲ್ಕು ಅಭ್ಯರ್ಥಿಗಳು Rank ಪಡೆದಿದ್ದಾರೆ.
ಚೆಲುವರಾಜು ಆರ್. 238, ಶೃತಿ ಯರಗಟ್ಟಿ ಎಸ್. 362, ಆದಿನಾಥ ಪದ್ಮಣ್ಣ ತಮದಡ್ಡಿ 566 ಹಾಗೂ ಪದ್ಮನಾಭ 923ನೇ Rank ಪಡೆದಿದ್ದಾರೆ.
ಅಕ್ಕ ಐಎಎಸ್ ಅಕಾಡೆಮಿ 2011ರಲ್ಲಿ ಸ್ಥಾಪನೆಯಾಯಿತು. ಈವರೆಗೆ ಸುಮಾರು ನೂರಕ್ಕೂ ಹೆಚ್ಚು ಜನ ಐಎಎಸ್, ಐಪಿಎಸ್, ಐಆರ್ ಎಸ್ ಅಧಿಕಾರಿಗಳನ್ನು ಹಾಗೂ ಇನ್ನೂರಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳನ್ನು ದೇಶಕ್ಕೆ ಕೊಟ್ಟಿದೆ.
ಯುಪಿಎಸ್ ಸಿ ಮತ್ತು ಕೆಪಿಎಸ್ ಸಿ ಯ ಮೂರು ಹಂತದ ಪರೀಕ್ಷೆಗಳಿಗೆ (ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ) ಅತ್ಯುತ್ತಮ ತರಬೇತಿಯನ್ನು ಅಕ್ಕ ಐಎಎಸ್ ಅಕಾಡಮಿ ನೀಡುತ್ತಿದೆ. ಜೊತೆಗೆ ಕನ್ನಡ ಸಾಹಿತ್ಯಕ್ಕೆ ಈ ಸಂಸ್ಥೆ ನಂಬರ್ ವನ್ ಸಂಸ್ಥೆ ಎಂದು ಹೆಸರುವಾಸಿಯಾಗಿದೆ. ಎಲ್ಲಿ ಎಲ್ಲಾ ರೀತಿಯ ನುರಿತ ಅಧ್ಯಾಪಕರು, ತರಬೇತುದಾರರಿದ್ದಾರೆ.
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಶ್ರೀಮತಿ ರತ್ನಪ್ರಭಾ ಅವರಿಂದ ವಿದ್ಯಾರ್ಥಿಗಳಿಗೆ ಅಣಕು ಸಂದರ್ಶನವನ್ನು (Mock interview) ಏರ್ಪಡಿಸಲಾಗಿತ್ತು. ಈ ಬಾರಿಯ ನಾಲ್ಕು ಅಭ್ಯರ್ಥಿಗಳು ಸಾಧನೆ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳಿಗೆ ಹಾಗೂ ಸಂಸ್ಥೆಗೆ ಶುಭಾಶಯಗಳು ಹರಿದು ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw