60ನೇ ವಯಸ್ಸಿನಲ್ಲಿ ಫ್ಯಾಷನ್ ಉದ್ಯಮಿಯನ್ನು ವಿವಾಹವಾದ ನಟ ಆಶಿಷ್ ವಿದ್ಯಾರ್ಥಿ
![ashish vidyarthi](https://www.mahanayaka.in/wp-content/uploads/2023/05/Ashish-Vidyarthi.jpg)
ಕನ್ನಡ ಸೇರಿದಂತೆ ರಾಷ್ಟ್ರದ ನಾನಾ ಭಾಷೆಗಳಲ್ಲಿ ಖಳನಾಯಕನಾಗಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದ ಆಶಿಷ್ ವಿದ್ಯಾರ್ಥಿ ಇದೀಗ ತಮ್ಮ 60ನೇ ವಯಸ್ಸಿನಲ್ಲಿ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ವಿವಾಹವಾಗಿದ್ದಾರೆ.
ಅಸ್ಸಾಮ್ ನ ಗುವಾಹಟಿಯವರಾಗಿರುವ ರೂಪಾಲಿ ಅವರೊಂದಿಗೆ ಹಾರ ಬದಲಿಸಿಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಿರುವ ಆಶಿಷ್ ವಿದ್ಯಾರ್ಥಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಶಿಶ್ ವಿದ್ಯಾರ್ಥಿ ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಅವರ ಜೊತೆಗೆ ಮೊದಲ ವಿವಾಹವಾಗಿದ್ದರು. ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ದೂರವಾಗಿದ್ದರು. ಇದೀಗ ರೂಪಾಲಿ ಜೊತೆಗೆ ಎರಡನೇ ವಿವಾಹವಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕ ನಟನಾಗಿ 11 ಭಾಷೆಗಳ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಆಶಿಷ್ ವಿದ್ಯಾರ್ಥಿ ನಟಿಸಿದ್ದಾರೆ. ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ದೇಶದ ಹಲವು ನಗರಕ್ಕೆ ಭೇಟಿ ನೀಡಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫೂಡ್ ವ್ಲಾಗಿಂಗ್ ಮಾಡುವ ಅವರ ಕಾರ್ಯಕ್ರಮ ಬಹಳ ಜನಪ್ರಿಯವಾಗಿದೆ.
ರೂಪಾಲಿ ಜೊತೆಗೆ ಮದುವೆಯಾಗಿರುವುದು ಅದ್ಭುತ ಅನುಭವ. ನಾವು ಸರಳವಾಗಿ ರಿಜಿಸ್ಟರ್ ಮದುವೆಯಾಗಿದ್ದೇವೆ. ಸಂಜೆ ಆಪ್ತರಿಗೆ ರಿಸೆಪ್ಷನ್ ಆಯೋಜಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಇನ್ನೂ ರೂಪಾಲಿ ಅವರನ್ನು ಹೇಗೆ ಭೇಟಿಯಾದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೊಂದು ದೊಡ್ಡ ಕಥೆ, ಬಿಡುವು ಮಾಡಿಕೊಂಡು ಯಾವಾಗಾದ್ರು ಹೇಳುತ್ತೇನೆ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw