ಸಚಿವ ಸ್ಥಾನ ಕೊಡದಿದ್ದರೇ ಕಾಂಗ್ರೆಸ್ ಕಚೇರಿ ಮುಂದೆ ಸೂಸೈಡ್ ಮಾಡಿಕೊಳ್ತೇನೆ: ಬೆದರಿಕೆಗೆ ಕಾಂಗ್ರೆಸ್ ಸುಸ್ತು
ಚಾಮರಾಜನಗರ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೇ ಕಾಂಗ್ರೆಸ್ ಕಚೇರಿ ಮುಂದೆ ಸೂಸೈಡ್ ಮಾಡಿಕೊಳ್ಳುವೆ ಎಂದು ಅಭಿಮಾನಿಯೋರ್ವ ಪತ್ರ ಬರೆದು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿರುವ ಘಟನೆ ನಡೆದಿದೆ.
ನಲ್ಲೂರುಮೋಳೆಯ ಚಂದ್ರಶೇಖರ್ ಎಂಬವರು ಈ ಪತ್ರ ಬರೆದಿದ್ದು “ನಮ್ಮ ಉಪ್ಪಾರ ಸಮಾಜದ ಏಕೈಕ ಶಾಸಕ, ನಾಲ್ಕು ಬಾರಿ ಗೆದ್ದಿರುವ ಸಿ.ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ಸಚಿವ ಸ್ಥಾನ ಕೊಡದಿದ್ದರೆ ನಾನು ಚಂದ್ರಶೇಖರ್ s/o ನಂಜುಂಡಶೆಟ್ಟಿ ನಲ್ಲೂರುಮೋಳೆ ಕಾಂಗ್ರೆಸ್ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದು. ನಂಬಿಕೆ ದ್ರೋಹದ ಕೆಲಸವನ್ನು ಕಾಂಗ್ರೆಸ್ ಮತ್ತು ಹೈಕಮಾಂಡ್
ಮಾಡಿದೆ. ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ದರೆ ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಕಾರಣಕರ್ತರು ಎಂದು ಎಚ್ಚರಿಸಿದ್ದಾರೆ.
ನನ್ನ ಸಾವಿನಲ್ಲೂ ಸಹ ನಮ್ಮ ಉಪ್ಪಾರ ಸಮಾಜ ನಿಮ್ಮ ಪಕ್ಷವನ್ನು ಬಿಟ್ಟು ಉಗ್ರ ಹೋರಾಟ ಮಾಡುತ್ತದೆ ಎಂದು ಪತ್ರದಲ್ಲಿ ಚಂದ್ರಶೇಖರ ಬರೆದಿದ್ದಾರೆ.
ಉಪಸಭಾಪತಿ ಸ್ಥಾನಬೇಡ. ಉಪ್ಪಾರ ಸಮಾಜದಲ್ಲಿ ನಾಲ್ಕು, ಐದು ಶಾಸಕರಿದ್ದಿದ್ದರೆ ಈ ಸ್ಥಾನ ಸ್ವೀಕಾರ ಮಾಡಬಹುದಿತ್ತು. ಆದರೆ ಒಬ್ಬರೇ ಇರುವುದರಿಂದ ಸಚಿನ ಸ್ಥಾನ ನೀಡಬೇಕೆಂದು ಅವರ ಒತ್ತಾಯ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw