ತಮ್ಮನನ್ನೇ ಕೊಂದ ಅಕ್ಕ: ಕಾರಣ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಾ..!
ಇದೊಂದು ಹೃದಯ ವಿದ್ರಾವಕ ಘಟನೆ. ಹರಿಯಾಣದಲ್ಲಿ 15 ವರ್ಷದ ತರುಣಿ ತನ್ನ 12 ವರ್ಷದ ತಮ್ಮನನ್ನು ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ.
ಹೆತ್ತವರಿಗೆ ನನ್ನ ತಮ್ಮನಲ್ಲಿಯೇ ಅತ್ಯಂತ ಹೆಚ್ಚು ಪ್ರೀತಿ. ಆತನನ್ನೇ ಮುದ್ದಾಡುತ್ತಾರೆ. ಹೀಗಾಗಿ ನಾನು ಆತನನ್ನು ಕೊಂದೆ ಎಂದು ಈ ಅಕ್ಕ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಹೆತ್ತವರು ತಮ್ಮ ಮಕ್ಕಳ ನಡುವೆ ತಾರತಮ್ಯ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಪಾಠವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚಿಸತೊಡಗಿದ್ದಾರೆ.
ಸಂಜೆ ಕೆಲಸ ಮುಗಿಸಿ ಮನೆಗೆ ಹೆತ್ತವರು ಬಂದಾಗ ಮಗ ಚಾದರದ ಒಳಗಡೆ ಮಲಗಿರುವುದು ಕಾಣಿಸಿತು. ಎಷ್ಟೇ ಕರೆದರೂ ಮಿಸುಕಾಡಲಿಲ್ಲ. ಪರಿಶೀಲಿಸಿದಾಗ ಮಗನ ಪ್ರಾಣ ಪಕ್ಷಿ ಹಾರಿ ಹೋಗಿರುವುದು ಗೊತ್ತಾಯಿತು. ಹಿರಿಯ ಮಗಳು ಮಾತ್ರ ಮನೆಯಲ್ಲಿದ್ದಳು, ಬಳಿಕ ಪೊಲೀಸರು ಮನೆಗೆ ಬಂದು ಈಕೆಯಲ್ಲಿ ಪ್ರಶ್ನಿಸಿದಾಗ ಆಕೆ ಎಲ್ಲವನ್ನೂ ಬಹಿರಂಗಪಡಿಸಿದಳು.
ಆಕೆಯ ತಮ್ಮ ಉತ್ತರ ಪ್ರದೇಶದ ತಮ್ಮ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಕಲಿಯುತ್ತಿದ್ದ. ರಜಾವಧಿಯನ್ನು ಕಳೆಯುವುದಕ್ಕಾಗಿ ಆತ ಹರಿಯಾಣದ ತನ್ನ ಮನೆಗೆ ಬಂದಿದ್ದ.
ತನಗಿಂತ ತನ್ನ ತಮ್ಮನ ಮೇಲೆ ಹೆತ್ತವರಿಗೆ ಹೆಚ್ಚು ಪ್ರೀತಿ ಎಂದು ತನಗೆ ಅನಿಸಿತು ಎಂದಾಕೆ ಹೇಳಿದ್ದಾಳೆ. ತನ್ನ ತಮ್ಮನಿಗೆ ಹೆತ್ತವರು ಮೊಬೈಲ್ ಫೋನ್ ಸಹಿತ ಬೇಕಾದುದನ್ನೆಲ್ಲ ಖರೀದಿಸಿ ಕೊಡುತ್ತಾರೆ ಎಂದಾಕೆ ಹೇಳಿದ್ದಾಳೆ. ಈ ಘಟನೆ ನಡೆದ ದಿನದಂದು ತಮ್ಮ ಮೊಬೈಲ್ ಗೇಮ್ಸ್ ಆಡುತ್ತಿದ್ದು ಈಕೆ ಕೇಳಿದ್ದರೂ ಆತ ಕೊಟ್ಟಿರಲಿಲ್ಲ. ಈ ಸಿಟ್ಟಿನಲ್ಲಿ ಆತನ ಕತ್ತನ್ನು ಹಿಸುಕಿ ಕೊಂದಿರುವುದಾಗಿ ಆಕೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw